ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಅಮರ ಪಡ್ನೂರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಗೊಂಡಿರುವ ಶ್ರೀಮತಿ ರೂಪವಾಣಿ ರವರಿಗೆ ಪೋಷಕರು, ಶಾಲಾಭಿವೃದ್ಧಿ ಸಮಿತಿ, ವಿದ್ಯಾರ್ಥಿ ವೃಂದ, ಅಕ್ಷರ ದಾಸೋಹ ಸಿಬ್ಬಂದಿ ಹಾಗೂ ವಿದ್ಯಾಭಿಮಾನಿಗಳಿಂದ ಸನ್ಮಾನ ಸಮಾರಂಭವು ದೇವಚಳ್ಳ ಸ ಹಿ ಪ್ರಾ ಶಾಲೆಯಲ್ಲಿ ನೆರವೇರಿತು.
ಬಡ್ತಿ ಹೊಂದಿದ ಶಿಕ್ಷಕರನ್ನು ನಿವೃತ್ತ ಮುಖ್ಯ ಶಿಕ್ಷ ಕರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ಶಾಖೆಯ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪೇರಾಲು ರವರು ಸನ್ಮಾನಿಸಿ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಸವಿತಾ ರವರು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ದೇವಚಳ್ಳ ಇದರ ಮಾಜಿ ಅಧ್ಯಕ್ಷರಾದ ನಾರಾಯಣಗೌಡ ಬಾಳೆತೋಟ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಹರಿಪ್ರಸಾದ್ ಎಲಿಮಲೆ, ಪ್ರೌಢ ಶಾಲೆಯ ಶಾಲಾಭಿವದ್ಧಿ ಸಮಿತಿಯ ಕಾರ್ಯಾಧ್ಯಕ್ಷರಾದ ಜಯಂತ ಹರ್ಲಡ್ಕ, ಮುಖ್ಯ ಶಿಕ್ಷಕರಾದ ಶ್ರೀಧರ ಗೌಡ ಕೆರೆಮೂಲೆ ಹಾಗೂ ಶ್ರೀಮತಿ ಲಲಿತಾ ಕೆರೆಮೂಲೆ ರವರು ಭಾಗವಹಿಸಿದ್ದರು.
ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಧರ ಗೌಡ ಕೆರೆಮೂಲೆ ರವರು ಸ್ವಾಗತಿಸಿ ಶ್ರೀ ನಯನಾ ಟಿ. ವಂದಿಸಿದರು. ಸಹ ಶಿಕ್ಷಕಿ ನಯನಾ ಕೆ ರವರು ಕಾರ್ಯಕ್ರಮ ನಿರೂಪಿಸಿದರು ಜೀವನ್ ತಳೂರು ಅಭಿನಂದನಾ ಪತ್ರ ವಾಚಿಸಿದರು. ಪೋಷಕರು ಹಾಗೂ ಎಸ್ ಡಿಎಂಸಿ ಪರವಾಗಿ ಪುರುಷೋತ್ತಮ ಸುಳ್ಳಿ ,ಓಂಪ್ರಸಾದ್ ಕಜೆ, ಉಮ್ಮರ್ ಜೀರ್ಮುಕ್ಕಿ ಶಿಕ್ಷಕರ ಸೇವೆಯನ್ನು ಸ್ಮರಿಸಿ ಶುಭ ಹಾರೈಸಿದರು. ವಿದ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಕಾರ್ಯಕ್ರಮದಲ್ಲಿ ವರ್ಗಾವಣೆಗೊಂಡ ಶಿಕ್ಷಕಿ ಶ್ರೀಮತಿ ರೂಪವಾಣಿ ರವರು ಶಾಲೆಗೆ ಫ್ಯಾನ್ ಹಾಗೂ ದತ್ತಿನಿಧಿ ನೀಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.