ವಿ.ಕೆ.ನ್ಯೂಸ್ (ಮಾಲೂರು): ಮಾಲೂರು ತಾಲ್ಲೂಕಿನ ಪ್ರಸಿದ್ದ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಅಲಂಬಡಿಯ ಕ್ರೈಸ್ಟ್ ನಗರದಲ್ಲಿರುವ ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ಗೆ ವಿವಿಧ ಪಠ್ಯತೇರ ಚಟುವಟಿಕೆಗಳಿಗೆ ಸಂಬಂಧಿಸಿದ ಶಿಕ್ಷಕರು ಬೇಕಾಗಿದ್ದಾರೆ ಎಂದು ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲರಾದ ಡಾ.ರಾಜೇಶ್ ಜಾರ್ಜ್ ರವರು ತಿಳಿಸಿದ್ದಾರೆ.
ವಿವಿಧ ಪಠ್ಯತೇರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಶಿಕ್ಷಕರೆಂದರೆ ಕರಾಟೆ, ಕುಂಗ್-ಫೂ, ರೈಫಲ್ ಶೂಟಿಂಗ್, ಸ್ಕೇಟಿಂಗ್, ನೃತ್ಯ, ಕೀಬೋರ್ಡ್, ವಾಯಲೀನ್, ಗೀಟಾರ್, ಡ್ರಾಂ, ತಬಲ, ಸಂಗೀತ ಇತರೆ ಕ್ಷೇತ್ರಗಳಿಗೆ ವಿಶೇಷ ಪಾಂಡಿತ್ಯ ಪಡೆದಿರುವ ಶಿಕ್ಷಕರು ಕೂಡಲೇ ತಮ್ಮ ಬಾಯೋಡಾಟ ಅರ್ಜಿಯೊಂದಿಗೆ ದಿನಾಂಕ: 27-06-2022 ನೇ ಸೋಮವಾರ ಬೆಳಿಗ್ಗೆ 10 ಕ್ಕೆ ನೇರಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಕ್ರೈಸ್ಟ್ ಇಂಟರ್ ನ್ಯಾಷನಲ್ ಸ್ಕೂಲ್ ನ ಪ್ರಾಂಶುಪಾಲರು ತಿಳಿಸಿದ್ದಾರೆ.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.