ಕುವೈತ್ ನಗರ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ಏಳು ವರ್ಷಗಳಲ್ಲಿ ಕುವೈಟ್ ನಲ್ಲಿ ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ 620 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಲ್ಲಿ 342 ಅಥವಾ ಶೇ.55ರಷ್ಟು ಮಂದಿ ಭಾರತೀಯರು. ಈ ಮಾಹಿತಿಯು ಕುವೈತ್ ನ ಆಂತರಿಕ ಸಚಿವಾಲಯ ಬಿಡುಗಡೆ ಮಾಡಿದ ಅಂಕಿಅಂಶಗಳನ್ನು ಆಧರಿಸಿದೆ. ಇದು 2015 ರ ಪ್ರಾರಂಭದಿಂದ 2021 ರ ನವೆಂಬರ್ 18 ರವರೆಗಿನ ಅಂಕಿ ಅಂಶವಾಗಿದೆ.
ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ 132 ಕೊಲೆಗಳು ನಡೆದಿವೆ ಎಂದು ಸಂಸತ್ ಸದಸ್ಯ ಅಬ್ದುಲ್ ಅಜೀಜ್ ಅಲ್-ಸಖಾಬಿ ಅವರ ಪ್ರಶ್ನೆಗೆ ಸಚಿವಾಲಯ ಉತ್ತರಿಸಿದೆ. ಈ ಅವಧಿಯಲ್ಲಿ, 54 ಸ್ಥಳೀಯರು ಆತ್ಮಹತ್ಯೆ ಮಾಡಿಕೊಂಡರು. ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರ ದೇಶಗಳ ಜನರ ಸಂಖ್ಯೆ ಈ ಕೆಳಗಿನಂತಿದೆ- ಬಾಂಗ್ಲಾದೇಶ: 53, ನೇಪಾಳ: 45, ಶ್ರೀಲಂಕಾ: 25, ಫಿಲಿಪ್ಪೀನ್ಸ್: 24, ಈಜಿಪ್ಟ್: 19, ಪೌರತ್ವರಹಿತ: 11, ಇಥಿಯೋಪಿಯಾ: 7. ಇತರ ದೇಶಗಳ ಜನರು ಮತ್ತು ರಾಷ್ಟ್ರೀಯತೆಯನ್ನು ಗುರುತಿಸದ ಜನರು: 40.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.