ಜೆದ್ದಾ(www.Vknews.in): ಇಂಡಿಯನ್ ಸೋಶಿಯಲ್ ಫೋರಮ್ ಜಿದ್ದಾ, ಇದರ ‘ಸದಸ್ಯತ್ವ ಅಭಿಯಾನದ – 2022’ ಅಂಗವಾಗಿ ಕ್ರಿಕೆಟ್ ಪಂದ್ಯಾಟವು 22/07/2022 ರಂದು ಜಿದ್ದಾದಲ್ಲಿ ನಡೆಯಿತು. ಪಂದ್ಯಾಟವನ್ನು ಇಂಡಿಯನ್ ಸೋಶಿಯಲ್ ಫೋರಮ್ ಜಿದ್ದಾ ಬ್ಲಾಕ್ ಅಧ್ಯಕ್ಷರಾದ ಹಮೀದ್ ವಿಟ್ಲ ಉದ್ಘಾಟಿಸಿದರು. ಸದಸ್ಯತ್ವ ಅಭಿಯಾನದ ಮಹತ್ವವನ್ನು ಇಂಡಿಯನ್ ಸೋಶಿಯಲ್ ಫೋರಮ್ ನ ರಾಜ್ಯ ಸಮಿತಿ ಸದಸ್ಯ ಕಲಂದರ್ ಸೂರಿಂಜೆ ವಿವರಿಸಿದರು. ಮುಖ್ಯ ಅತಿಥಿಯಾಗಿ ಇಂಡಿಯನ್ ಸೋಶಿಯಲ್ ಫೋರಮ್ ನ ಸದಸ್ಯ ಹಾಗೂ ಜಮೀಯತುಲ್ ಫಲಾಹ್ ನ ಅಧ್ಯಕ್ಷರೂ ಆದ ಶೇಕ್ ಮುಹಮ್ಮದ್ ಅನ್ಸಾರ್ ರವರು ಆಗಮಿಸಿದ್ದರು. ಈ ಪಂದ್ಯಾಕೂಟದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಪಂದ್ಯದ ಚಾಂಪಿಯನ್ ಆಗಿ “ಬಾವಾದಿ – ಬಿ” ತಂಡವು ಮೂಡಿ ಬಂದರೆ, ದ್ವಿತೀಯ ಸ್ಥಾನಕ್ಕೆ “ಬಾವಾದಿ – ಎ” ತಂಡ ತೃಪ್ತಿಪಟ್ಟಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.