(www.vknews.in) : ಶೇಕಮಲೆ ಮುಹಿಯುದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಜಮಾಅತ್ ಅಧ್ಯಕ್ಷರಾದ ಎಸ್ ಎಂ ಅಹ್ಮದ್ ಬಶೀರ್ ಹಾಜಿಯವರು ದ್ವಜಾರೋಹಣ ನೆರವೇರಿಸಿದರು. ಜಮಾಅತ್ ಮುದರ್ರಿಸ್ ಅಬ್ದುರ್ರಹ್ಮಾನ್ ಬಾಖವಿ ಉಸ್ತಾದ್ ಪ್ರಾರ್ಥನೆ ಗೈದರು. ಜಮಾಅತ್ ಕಾರ್ಯದರ್ಶಿ ಎಸ್ ಪಿ ಬಶೀರ್ ಶೇಕಮಲೆ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.
ಮದ್ರಸ ಮುಖ್ಯೋಪಾಧ್ಯಾಯರಾದ ಉಸ್ಮಾನ್ ಮುಸ್ಲಿಯಾರ್, ಜಮಾಅತ್ ಕಮಿಟಿ ಸದಸ್ಯರಾದ ಬಶೀರ್ ಕೌಡಿಚಾರ್ ಭಾಷಣ ಮಾಡಿದರು. ಜಮಾಅತ್ ಉಪಾಧ್ಯಕ್ಷರುಗಳಾದ ಎಸ್ ಅಬ್ಬಾಸ್ ಶೇಕಮಲೆ, ಕೆ ಪಿ ಸಾದಿಕ್ ಹಾಜಿ ಕುಂಬ್ರ, ಜಮಾಅತ್ ಕಮಿಟಿ ಸದಸ್ಯರುಗಳಾದ ಹಾಜಿ ಅಲೀ ಮಾಸ್ಟರ್, ಮೊಹಮ್ಮದ್ ಬೊಳ್ಳಾಡಿ, ಎಸ್ ಎಂ ಅಬ್ದುಸ್ಸಲಾಮ್ ಶೇಕಮಲೆ, ಯಂಗ್ ಮೆನ್ಸ್ ಅಧ್ಯಕ್ಷರಾದ ಮಜೀದ್ ಅಲಂಗೂರು, ಮುಹಮ್ಮದ್ ಮುಸ್ಲಿಯಾರ್ ಶೇಕಮಲೆ ಮುಂತಾದವರು ಉಪಸ್ಥಿತರಿದ್ದರು.
ಯಂಗ್ ಮೆನ್ಸ್ ಕಾರ್ಯದರ್ಶಿ ಅಝ್ಮುದ್ದೀನ್ ಅಹ್ಮದ್ ಸ್ವಾಗತಿಸಿ, ಹಾರಿಸ್ ಅಲಂಗೂರು, ಎಸ್ ಎಂ ಆಸಿಫ್ ಇಕ್ಬಾಲ್ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.