(www.vknews.in) ಅ 15. ಮೂಲ್ಕಿ, ಮಸ್ಜಿದ್ ಅತ್ತೌಹೀದ್ ಕಾರ್ನಾಡ್ ಹಾಗೂ ಎಸ್ಕೆಎಸ್ಎಂ ಮೂಲ್ಕಿ ಘಟಕದ ವತಿಯಿಂದ ಸ್ವಾತಂತ್ರತ್ಸೋವವನ್ನು ದಾರುಲ್ ಇಲ್ಮ್ ಕಾರ್ನಾಡ್ ಮದ್ರಸದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ಇಂದು ಮಸ್ಜಿದ್ ಅತ್ತೌಹೀದ್ ಮುಂಭಾಗದಲ್ಲಿ ಆಚರಿಸಲಾಯಿತು.
ಮಸ್ಜಿದ್ ಅತ್ತೌಹೀದ್ ಆಡಳಿತ ಸಮಿತಿಯ ಅಧ್ಯಕ್ಷರಾದ ಶೇಕ್ ಮುಹಮ್ಮದ್ ಯೂಸುಫ್ ಧ್ವಜಾರೋಹಣಗೈದರು. ಧ್ವಜಾರೋಹಣವಾದೊಡನೆ ದಾರುಲ್ ಇಲ್ಮ್ ಮದ್ರಸದ ಮಕ್ಕಳ ನೇತೃತ್ವದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಯ್ತು.
ಭಾರತೀಯ ವಾಯುಸೇನೆಯಲ್ಲಿ ಐಎಎಫ್ ಫ್ಲೈಯಿಂಗ್ ಆಫೀಸರ್ ಆಗಿ ಕಾರ್ಯನೀರ್ವಹಿಸಿದಂತಹ ಸಮಾಜ ಸೇವಕರಾಗಿರುವ ಸನ್ಮಾನ್ಯ ಎಂ.ಬಿ. ಖಾನ್ ರವರನ್ನು ಅವರು ಸೇನೆಗೆ ಸಲ್ಲಿಸಿದ ಸೇವೆಯನ್ನು ಗೌರವಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಹಿತಚಿಂತಕರಾಗಿರುವ ಸನ್ಮಾನ್ಯ ಎಂ.ಹೆಚ್. ಅಬ್ದುಲ್ ಹಮೀದ್ ಮೂಲ್ಕಿಯವರು ಮಾತನಾಡಿ ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದವರ ಸೇವೆಯನ್ನು ಸ್ಮರಿಸುತ್ತಾ, ದೇಶದ ಸಂವಿಧಾನವೂ ಪ್ರತಿಯೋರ್ವ ಪ್ರಜೆಗೂ ಭಾರತದಲ್ಲಿ ನೆಲೆಸಲು ಸಮಾನ ಅವಕಾಶವನ್ನು ಕಲ್ಪಿಸಿದೆ ಎಂದು ತನ್ನ ಭಾಷಣದಲ್ಲಿ ಹೇಳಿದರು.
ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತ ಸಮಿತಿಯ ಸದಸ್ಯರುಗಳಾದ ಸಾದಿಕ್ ಅಲಿ ಮೂಲ್ಕಿ, ಅಹ್ಮದ್ ಬಾವ, ಶಬ್ಬೀರ್ ಎಂ. ಹೆಚ್, ಮೊಯಿದ್ದೀನ್ ಪಲಿಮಾರು, ಉಮರ್ ಫಾರೂಕ್, ರಮ್ಲಾನ್ ಅಬ್ಬಾಸ್, ಅಬ್ದುಲ್ ರಝಕ್, ಅಕ್ಬರ್ ಸ್ಟಾರ್, ಸೌಹಾನ್ ಮೊಯಿದ್ದೀನ್, ಆರ್ಷದ್ ಅಹ್ಮದ್ ಹಿರಿಯರಾದ ಮುಹಮ್ಮದ್ ಬಾವ, ಶರೀಫ್ ಕೊಳ್ನಾಡ್, ಬಷೀರ್ ಕೊಳ್ನಾಡ್, ಮುಹಮ್ಮದ್ ಕೊಳ್ನಾಡ್, ಫಿರೋಝ್, ಇಕ್ಬಾಲ್, ಹಫೀಜ್ ಕಿಲ್ಪಾಡಿ, ನೂರುಲ್ ಹುಸೈನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ರಿಯಾಝ್ ಹೆಚ್. ಕಾರ್ನಾಡ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು, ಶೇಕ್ ಮುಹಮ್ಮದ್ ಧನ್ಯವಾದವಿತ್ತರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.