(www.vknews.in) ಬಾಕ್ರಬೈಲು:- ಡ್ರೀಮ್ ಬೋಯ್ಸ್ ರಿ.ಬಾಕ್ರಬೈಲು ಇದರ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಆಚರಣೆಯು ಅದ್ದೂರಿಯಾಗಿ ಜರಗಿತು.ಬಾಕ್ರಬೈಲು ಎ.ಯು.ಪಿ ಶಾಲೆಯ ಮಕ್ಕಳ ಮರೆವಣಿಗೆ ನಡೆಯಿತು.ಸಿಹಿತಿಂಡಿ ವಿತರಿಸಲಾಯಿತು.ವರ್ಕಾಡಿ ಗ್ರಾಮಪಂಚಯತ್ ಮಾಜಿ ಅಧ್ಯಕ್ಷರು ವರ್ಡ್ ಸದಸ್ಯರಾದ ಬಿ.ಎ ಅಬ್ದುಲ್ ಮಜೀದ್ ಅಧ್ಯಕ್ಷತೆ ವಹಿಸಿದರು.ಬಾಕ್ರಬೈಲು ಶಾಲೆ ಮುಖ್ಯೋಪಾಧ್ಯಾಯ ಶ್ರೀ ಪಿ.ಬಿ ಶ್ರೀನಿವಾಸ ರಾವ್. ಸ್ವಾಗತಿಸಿದರು .ಹಿರಿಯ ಉದ್ಯಮಿ ಇಬ್ರಾಹಿಂ ಹಾಜಿ ನಡಿಬೈಲು ದ್ವಜಾರೋಹಣಗೈದರು.ಡ್ರೀಮ್ ಬೋಯ್ಸ್ ಉಪಾಧ್ಯಕ್ಷ ಆಸಿಫ್ ನಡಿಬೈಲು ಸ್ವಾಗತಿಸಿದರು, ಡಿ.ಬಿ ಅಬ್ದುಲ್ ಖಾದರ್ ಬಾಕ್ರಬೈಲು ಸ್ವಾತಂತ್ರ್ಯ ದಿನ ಮುಖ್ಯ ಪ್ರಭಾಷಣೆಗೈದರು.ಕೆ ವಸಂತ ಭಂಡಾರಿ ಕಯ್ಯ.ಅಬೂಬಕ್ಕರ್ ಅಝ್ಹರಿ ಶುಭಾ ಹಾರೈಸಿದರು,ಅಹಮದ್ ಕುಂಞಿ ಹಾಜಿ ಕಲ್ಲರ್ಕಟ್ಟೆ, ಕೆ.ಎಮ್ ಮುಹಮ್ಮದ್ ಕುಂಞಿ ಹಾಜಿ ನಡಿಬೈಲು,ಡಿ ವಿಠಲ ಶೆಟ್ಟಿ ಬಾಕ್ರಬೈಲು, ಪಂಚಾಯತ್ ಸದಸ್ಯ ಡಿ.ಶೀತ,ಇಸ್ಮಾಯಿಲ್ ಪಾತುರು, ಲತೀಫ್ ಕಜೆ,ಹಸನ್ ಕುಂಞಿ ಪಾತೂರು,ಮುಹಮ್ಮದ್ ದಾರಿಮಿ ಉಪಸ್ಥಿತರಿದ್ದರು.ರಾಷ್ಟ್ರ ಗೀತೆ ಹಾಡಿದವರಿಗೆ ಡ್ರೀಮ್ ಬೋಯ್ಸ್ ಪ್ರದಾನಕಾರ್ಯದರ್ಶಿಯಾದ ಎನ್. ಎಸ್.ಶಿಹಾಬುದ್ದಿನ್ ನಡಿಬೈಲು ಸ್ಮರಣಿಕೆ ನೀಡಿ ಅಭಿನಂದಿಸಿದರು.ಡ್ರೀಮ್ ಬೋಯ್ಸ್ ಮಾಜಿ ಜೊತೆ ಕಾರ್ಯದರ್ಶಿ ರವೂಫ್ ಡಿ.ಬಿ ಧನ್ಯವಾದವನ್ನು ಮಾಡಿ ಕಾರ್ಯಕ್ರಮವನ್ನು ಮುಕ್ತಯ ಗೊಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.