ಮಲಪುರಂ (ವಿಶ್ವ ಕನ್ನಡಿಗ ನ್ಯೂಸ್) : ತಿರೂರ್ಕಾಡ್ ಎಎಮ್ ಹೈಸ್ಕೂಲ್ ವಿದ್ಯಾರ್ಥಿನಿ ಫಿದಾ ಫಾತಿಮಾ ಒಂದೇ ಒಂದು ಪ್ರಿ ಕಿಕ್ ಮೂಲಕ ಫುಟ್ಬಾಲ್ ಪ್ರೇಮಿಗಳ ಹೃದಯಗಳನ್ನು ಗೆದ್ದಿದ್ದಾರೆ. ಶಾಲೆಯ ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ನಡೆಸಿದ ಫುಟ್ಬಾಲ್ ಸ್ಪರ್ಧೆಯಲ್ಲಿ ಈ ಸಾಧನೆ ಮಾಡಿದ್ದಾರೆ.
ಶಾಲೆಯ ಶಿಕ್ಷಕರೋರ್ವರು ಮಾಡಿದ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿದ್ಯಾರ್ಥಿಗಳ ಜೂನಿಯರ್ ವಿಭಾಗದ ಸುಬ್ರತೋ ಕಪ್ ಉಪ ಜಿಲ್ಲಾ ವಿಜೇತ ಶಾಲಾ ತಂಡದ ಭಾಗವಾಗಿದ್ದ ಫಿದಾ ಕಳೆದ ವರ್ಷದ ಎನ್ಎಂಎಂಎಸ್ ಸ್ಕೋಲರ್ಶಿಪ್ ವಿಜೇತರಾಗಿದ್ದಾರೆ. ಈಕೆ ಮಲಪುರಂ ಜಿಲ್ಲೆಯ ಅರಿಪ್ರ ಜುಮಾ ಮಸೀದಿಯ ಖತೀಬ್ ಮುಟ್ಟುಪ್ಪಾರ ಶಿಹಾಬ್ ಮೌಲವಿ ಹಾಗು ಬುಶ್ರ ದಂಪತಿಗಳ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.