ಚಿತ್ರಜಗತ್ತು(ವಿಶ್ವಕನ್ನಡಿಗ ನ್ಯೂಸ್): ತೋರಿಸಬಹುದಿತ್ತು, ತೋರಿಸುತ್ತಿದ್ದರೆ ಈಗ ಸಿಕ್ಕಿದ ಯಶಸ್ಸಿಗಿಂತ ದುಪ್ಪಟ್ಟು ಯಶಸ್ಸು ಸಿಗುತ್ತಿತ್ತು. ಆದರೆ ಕಥೆ ಬರೆದು ಅದನ್ನ ಅಂತಿಮ ಹಂತ ತಲುಪಿಸುವವರೆಗು ನನ್ನ ಕಣ್ಣೆದುರಿದ್ದಿದ್ದು ಐದನೇ ತರಗತಿಯಲ್ಲಿ ಅಮ್ಮ ಕೊಟ್ಟ ಆ ಬೆತ್ತದೇಟು .
ಅದು ಶಾಲಾಯೆ ಛದ್ಮವೇಷ ಸ್ಪರ್ಧೆ,ಅಲ್ಲಿ ಮುಖಕ್ಕೆ ಬಣ್ಣ ಹಚ್ಚಿ ದೈವದ ವೇಷ ತೊಟ್ಟು ಅಬ್ಬರಿಸಿ ಬೋಬ್ಬಿಟ್ಟು ಮೊದಲ ಸ್ಥಾನ ಪಡೆದು ಮನೆಗೆ ಹೋದವನಿಗೆ ಅಮ್ಮ ಕೊಟ್ಟ ಉಡುಗೊರೆ ಮನಸೊಚ್ಚೆ ಬೆತ್ತದ ಏಟು. ಅವರು ಏಟು ಕೊಟ್ಟದ್ದಕ್ಕೆ ಕಾರಣ ಬಿಡಿಸಿ ಹೇಳುವ ಅಗತ್ಯವಿಲ್ಲ. ಅವಾಗ ಅವರು ಹೇಳಿದ ಮಾತು ಇಂದಿಗೂ ನೆನಪಿದೆ. “ದೈವದ ರೀತಿಯಲ್ಲಿ ಮುಖಕ್ಕೆ ಬಣ್ಣ ಹಚ್ಚುವ ಅಧಿಕಾರ ನಮಗಿಲ್ಲ. ಆ ಶಕ್ತಿ ಎಲ್ಲರಿಗೂ ಒಳಿಯಲ್ಲ ಅದನ್ನ ಮಾಡುವವರೇ ಇದ್ದಾರೆ ಆ ಅಧಿಕಾರ ನಮಗೆ ಯಾವತ್ತೂ ಇಲ್ಲ”. ಈ ಒಂದು ಮಾತು ಧರ್ಮ ದೈವ ಚಿತ್ರೀಕರಣದ ಪ್ರತಿ ಹಂತದಲ್ಲೂ ನನ್ನ ಸುತ್ತ ಮುತ್ತ ಸುತ್ತುತಿತ್ತು. ಇನ್ನು ಅನೇಕರು ತುಳು ಬಿಟ್ಟು ಕನ್ನಡದಲ್ಲಿ ಮಾಡುತ್ತಿದ್ದರೆ ಇನ್ನು ಬಹಳಷ್ಟು ಜನರಿಗೆ ಈ ಚಿತ್ರ ತಲುಪುತ್ತಿತ್ತಲ್ಲ ಎಂಬ ಪ್ರಶ್ನೆ?. ದೈವಾರಾಧನೆ ಅದು ನಮ್ಮ ಮಣ್ಣಿನ ಸೊತ್ತು.ಅದು ನಮ್ಮವರಿಗೆ ತಿಳಿದರೆ ಸಾಕು. ಹೊರಗಿನವರಿಗೆ ತಿಳಿದರು ದೈವ ಎಂಬುದು ಒಂದು ಪಾತ್ರವಾಗಿ ಮುಟ್ಟುತ್ತದೆಯೇ ಹೊರತು ಅದೊಂದು ಶಕ್ತಿಯಾಗಿ ತಲುಪಲು ಸಾಧ್ಯವೇ ಇಲ್ಲ.ಅದನ್ನು ಅವರು ಅರಿಯಲು ಪ್ರಯತ್ನ ಪಡಲಾರರು.ಅದು ನಮ್ಮ ಮಣ್ಣಿನ ಯುವ ಪೀಳಿಗೆಗೆ ತಿಳಿದರೆ ಸಾಕು. ನಾವು ಯಾವತ್ತೂ ನಮ್ಮ ಕಟ್ಟು ಪಾಡನ್ನ ಮೀರಿ ನಡೆಯಬಾರದು ಎಂಬುದು ನನ್ನ ಅನಿಸಿಕೆಯಾಗಿತ್ತು. ಇನ್ನು ಮುಂದೆಯೂ ಅಷ್ಟೇ ಧರ್ಮ ದೈವ ದೊಡ್ಡ ಪರದೆಯಲ್ಲಿ ಬಂದರು ಕೂಡ ಅಲ್ಲಿ ದೈವದ ವಸ್ತ್ರರೂಪ, ಕಾರ್ಣಿಕ ಸಿಗುತ್ತದೆಯೇ ಹೊರತು ಮುಖಚರ್ಯೆ ಸಿಗಲು ಸಾಧ್ಯವಿಲ್ಲ.
#ನಿರ್ದೇಶಕ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.