ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ದೇಶದ ಅತ್ಯಂತ ಬಲಿಷ್ಠ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಸುನ್ನೀ ವಿದ್ಯಾರ್ಥಿ ಸಂಘಟನೆ ಸುನ್ನೀ ಸುಡೆಂಟ್ಸ್ ಫೆಡರೇಷನ್ ಎಸ್ ಎಸ್ ಎಫ್ ಇದರ ಪ್ರಾಯೋಜಕತ್ವದಲ್ಲಿ ವಿದ್ಯಾರ್ಥಿ ಯುವ ಸಮೂಹದ ಸಾಹಿತ್ಯಾಭಿರುಚಿಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಪ್ರೋತ್ಸಾಹಿಸಲು ಸ್ಥಳೀಯ ಯೂನಿಟ್ ಮಟ್ಟದಿಂದ ಸೆಕ್ಟರ್, ಡಿವಿಷನ್, ಜಿಲ್ಲೆ, ಹಾಗೂ ರಾಜ್ಯ ಮಟ್ಟದಲ್ಲಿ ಸಾಹಿತ್ಯೋತ್ಸವ ಹಮ್ಮಿಕೊಂಡು ಇದೀಗ ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸಾಹಿತ್ಯೋತ್ಸವ ಡಿಸಂಬರ್ ಎರಡು, ಮೂರು, ನಾಲ್ಕು, ದಿನಾಂಕಗಳಲ್ಲಿ ನಡೆಯಲಿದೆ.
ಪ್ರಸ್ತುತ ಸಾಹಿತ್ಯೋತ್ಸವದಲ್ಲಿ ಭಾಗವಹಿಸಲು ಯಾತ್ರೆ ಹೊರಟ ಪ್ರತಿಭೆ ಗಾಂಧಿನಗರ ಮದ್ರಸ ಅಧ್ಯಾಪಕ ಇರ್ಫಾನ್ ಸಅದಿ ಜೋಗಿಬೆಟ್ಟು ರವರನ್ನು ಸಹಾಧ್ಯಾಪಕರು ಹಾಗೂ ಆತ್ಮೀಯರಿಂದ ಹಾರ್ದಿಕವಾಗಿ ಶುಭ ಹಾರೈಸಲಾಯಿತು.
ಈ ಸಂದರ್ಭ ನಿಝಾರ್ ಸಖಾಫಿ ಮುಡೂರು, ಅಬ್ದುಲ್ ಖಾದರ್ ಮದನಿ ಅಜ್ಜಾವರ, ಮುಹಮ್ಮದ್ ಹನೀಫ್ ಸಖಾಫಿ ಬೆಳ್ಳಾರೆ ,ಹುಸೈನಾರ್ ಮದನಿ ಕುಂಜಿಲ, ಅಬೂಬಕ್ಕರ್ ಸಖಾಫಿ ಅಯ್ಯಂಗೇರಿ, ಸಿರಾಜ್ ಸಅದಿ ಅಲೆಕ್ಕಾಡಿ, ರವೂಫ್ ಝುಹ್ರಿ, ಮದ್ರಸ ಉಸ್ತುವಾರಿ ಸಮಿತಿ ಸದಸ್ಯರಾದ ಎಸ್ ಎಂ ಹಮೀದ್ ಹಾಜಿ,ಸಿಬ್ಬಂದಿಗಳಾದ ಮುಹಮ್ಮದ್ ಕಲ್ಲುಮುಟ್ಲು, ಸಿದ್ದೀಖ್ ಮಾಸ್ಟರ್,ಮುನೀರ್ ನಾವೂರು ಮುಂತಾದವರು ಉಪಸ್ಥಿತರಿದ್ದರು. ಅಧ್ಯಾಪಕ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಶುಭ ಹಾರೈಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.