(www.vknews.in)
ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಹಾಗೂ ಯುವ ರೆಡ್ ಕ್ರಾಸ್ ಮಂಗಳೂರು ವಿಶ್ವ ವಿದ್ಯಾಲಯ ಇವುಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 4ನೇ ಡಿಸೆಂಬರ್ 2022 ಬೆಳಿಗ್ಗೆ 9.30ರಿಂದ ಜಿಲ್ಲಾ ತೃತೀಯ ಸಮಾವೇಶ ಮತ್ತು ವಿಶ್ವ ಅಂಗವಿಕಲರ ದಿನಾಚರಣೆಯನ್ನು ರವೀಂದ್ರ ಕಲಾಭವನ, ಹಂಪನಕಟ್ಟ, ಮಂಗಳೂರು ಇಲ್ಲಿ ಆಯೋಜಿಸಲಾಗಿದೆ.2022
ನಿಟ್ಟೆ ವಿಶ್ವ ವಿದ್ಯಾಲಯ ಇದರ ಉಪ ಕುಲಾಧಿಪತಿ ಡಾಕ್ಟರ್ ಶಾಂತಾರಾಮ ಶೆಟ್ಟಿ ಉದ್ಘಾಟಿಸುವ ಕಾರ್ಯಕ್ರಮದಲ್ಲಿ ಸಕ್ಷಮ ಅಧ್ಯಕ್ಷ ಡಾ ಮುರಳೀಧರ ನಾಯಕ್ ಅವರು ಅಧ್ಯಕ್ಷತೆ ವಹಿಸುವರು. ಡಾ ಕಲ್ಲಡ್ಕ ಪ್ರಭಾಕರ್ ಭಟ್, ಅದ್ಯಕ್ಷರು, ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇವರು ಸಮಾರೋಪ ಭಾಷಣ ಮಾಡುವರು.
ಶಾಸಕ ಶ್ರೀ ಡಿ ವೇದ ವ್ಯಾಸ ಕಾಮತ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಕ್ಷಮ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.