ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ವಧು ಮತ್ತು ವರ ವಿವಾಹ ಮಂಟಪದಲ್ಲೇ ಮಾರಾಮಾರಿ ಹೊಡೆದಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ವಿವರ ಬಹಿರಂಗಗೊಂಡಿಲ್ಲ.
ವಿಡಿಯೋ ಕ್ಲಿಪ್ ನಲ್ಲಿ, ಸಂಪ್ರದಾಯದಂತೆ ವರ ವಧುವಿಗೆ ಸಿಹಿಯನ್ನು ತಿನ್ನಿಸುವ ದೃಶ್ಯವಿದ್ದು, ವರ ವಧುವಿಗೆ ಸಿಹಿ ತಿಂಡಿಯನ್ನು ಬಲವಂತವಾಗಿ ಬಾಯಿಗೆ ತುರುಕಿಸಲು ಯತ್ನಿಸಿದಾಗ, ವಧು ಬಲವಾಗಿ ವರನನ್ನು ಹಿಂದೆ ತಳ್ಳುತ್ತಾಳೆ. ತಕ್ಷಣವೇ ಆಕೆ ವರನ ಕೆನ್ನೆಗೆ ಹೊಡೆಯುತ್ತಾಳೆ, ಆಗ ಸಿಟ್ಟುಗೊಂಡ ವರ, ವಧುವಿನ ಕೆನ್ನೆಗೆ ಬಾರಿಸುತ್ತಾನೆ.
ಈ ಸಂದರ್ಭದಲ್ಲಿ ಅವರ ಸಂಬಂಧಿಕರು ಸುತ್ತ-ಮುತ್ತ ಸೇರಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಸಂಬಂಧಿಕರು ಗಲಾಟೆಯನ್ನು ಶಮನಗೊಳಿಸಲು ಮುಂದಾದರೂ ವಧು ವರನನ್ನು ಕೆಳಕ್ಕೆ ಎಳೆದು ಹೊಡೆಯುತ್ತಿರುವ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.