(www.vknews.in) ಪ್ರತಿಯೊಬ್ಬರೂ ತನ್ನ ಬದುಕಿನ ಬಾಲ್ಯದ, ಯೌವನದ, ಮುಪ್ಪಿನ ಮೂರು ಹಂತದ ಬದುಕನ್ನು ಸಮಾಜಕ್ಕೆ ಪೂರಕವಾಗಿ ಮುನ್ನಡೆಸಿರಿ ಯಾವ ಕಾರಣಕ್ಕೂ ಮಾರಕವಾಗಿ ಮುನ್ನಡೆಸದಿರಿ ಎಂದು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಅದ್ಯಕ್ಷರಾದ ನಝೀರ್ ಹುಸೇನ್ ಅಭಿಪ್ರಾಯ ಪಟ್ಟರು. ಅವರು ಇಂದು ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಕೆನರಾ ಪ್ಲಾಸ್ಟಿಕ್ ಉತ್ಪಾದಕರು ಮತ್ತು ಮಾರಾಟಗಾರರ ಸಂಘ ಮಂಗಳೂರು, ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಇದರ ಸಂಯುಕ್ತ ಆಶ್ರಯದಲ್ಲಿ ಯೆನಪೋಯ ಆಸ್ಪತ್ರೆ ರಕ್ತನಿಧಿ ಗ ದೇರಳಕಟ್ಟೆ ಇವರ ಸಹಯೋಗದೊಂದಿಗೆ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ ) ಸಂಸ್ಥೆಯ 158ನೇ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವನ್ನು ಕೆನರಾ ಇಂಡಸ್ಟ್ರೀಸ್ ಕಟ್ಟಡ ಬೈಕಂಪಾಡಿಯಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಉದ್ಘಾಟನೆಯನ್ನು ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಅನಂತೇಶ್ ವಿ ಪ್ರಭು ಉದ್ಘಾಟಿಸಿ ಸಮಾಜ ಸೇವೆಯನ್ನು ಬದುಕಿನುದ್ದಕ್ಕೂ ಅಳವಡಿಸಿ ಕೊಂಡು ಧನ್ಯರಾಗಿರಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ವೇದಿಕೆಯಲ್ಲಿ ಕೆನರಾ ಪ್ಲಾಸ್ಟಿಕ್ ಉತ್ಪಾದಕರು ಮತ್ತು ಮಾರಾಟಗಾರರ ಸಂಘದ ಅಧ್ಯಕ್ಷರಾದ ಬಿ.ಎ.ನಝೀರ್, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಕೋಶಾಧಿಕಾರಿ ಸುರೇಶ್ ಕರ್ಕೆರಾ, ಉಪಾಧ್ಯಕ್ಷ ರಾದ ಅಸ್ಗರ್ ಆಲೀ, ಪ್ಲಾಸ್ಟಿಕ್ ಉತ್ಪಾದಕರು ಮತ್ತು ಮಾರಾಟಗಾರರ ಸಂಘದ ಕಾರ್ಯದರ್ಶಿ ಇಕ್ಬಾಲ್,ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಕಾರ್ಯದರ್ಶಿ ಆತ್ಮಿಕಾ ಅಮೀನ್, ಕೆನರಾ ಇಂಡಸ್ಟ್ರೀಸ್ ಅಸೋಸಿಯೇಷನ್ ಜತೆ ಕಾರ್ಯದರ್ಶಿ ರೋಬಿನ್ ಜೋಶ್, ಸಲಹೆಗಾರರಾದ ರಾಮಚಂದ್ರ ,ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ)ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಪ್ವಾನ್ ಕಲಾಯಿ ಉಪಸ್ಥಿತರಿದ್ದರು. ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ) ಸಂಸ್ಥೆಯ ಕೋಶಾಧಿಕಾರಿ ಸತ್ತಾರ್ ಪುತ್ತೂರು ಸ್ವಾಗತಿಸಿದರು, ಶಿಬಿರ ಸಂಯೋಜಕ ಇಂತಿಯಾಝ್ ಬಜಪೆ ವಂದಿಸಿದರು, ಅಬ್ದುಲ್ ಹಮೀದ್ ಗೋಳ್ತಮಜಲ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.