(www.vknews.in) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಈ ಹಿಂದಿನಂತೆ ರಿಯಾಯತಿ ದರದ ಬಸ್ ಪಾಸ್ ಮತ್ತು ಆದರ ನವೀಕರಣಕ್ಕೆ ಅರ್ಜಿ ಕರೆದಿದ್ದು ದಿನಾಂಕ 26.12.2022 ರಿಂದ ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹಿಂದಿನ ಬಸ್ ಪಾಸ್ ಅವದಿ 31.12.2022ರಂದು ಮುಕ್ತಾಯಗೊಂಡಿದ್ದು ಅದನ್ನು ನವೀಕರಿಸಲು ಅನುಕೂಲವಾಗುವಂತೆ 26.02.2023ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ಣಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸೇವಾ ಸಿಂಧು ಪೋರ್ಟಲ್ ಮುಖಾಂತರ ಆನ್ಲೈನ್ ಅರ್ಜಿ ಸಲ್ಲಿಸಲು ಅಂಗವಿಕಲರಿಗೆ ತೊಂದರೆ ಆಗುವುದಿದ್ದರೆ ಶ್ರೀ ಕೊಡಕ್ಕಲ್ ಶಿವಪ್ರಸಾದ್, ಅದ್ಯಕ್ಷರು, ಭಾರತೀಯ ಅಂಗವಿಕಲರ ಸಬಲೀಕರಣ ಸಂಸ್ಥೆ ಶಿವಮೊಗ್ಗ ಇವರ ಮೊಬೈಲ್ ನಂಬರ್ 9482533747 ಇದಕ್ಕೆ ಎಸ್ ಎಮ್ ಎಸ್ ಕಳುಹಿಸಿ ಸಲಹೆ ಪಡೆಯಲು ಕೋರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.