ಮೇಲ್ಕಾರ್ (ವಿಶ್ವ ಕನ್ನಡಿಗ ನ್ಯೂಸ್) : ಬೊಳ್ಳಾಯಿ ನಿವಾಸಿಯಾಗಿರುವ ಹಾಗೂ ಸುಮಾರು 40 ವರ್ಷಗಳ ಕಾಲ ಹಲವಾರು ಮಸೀದಿಗಳಲ್ಲಿ ಖತೀಬರಾಗಿ ಸೇವೆಗೈದ ಬಹುಃ ಇ.ಕೆ.ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಬಾಖವಿ ರವರು ನಿಧನರಾಗಿದ್ದಾರೆ.
ಇವರು ಕೇರಳದ ಕ್ಯಾಲಿಕಟ್ ನಂದಿ ದಾರುಸ್ಸಲಾಂ ಅರೆಬಿಕ್ ಕಾಲೇಜ್ ನಲ್ಲಿ ವೈಸ್ ಪ್ರಿನ್ಸಿಪಾಲ್ ರಾಗಿ ಸೇವೆಯಲ್ಲಿರುವ ಬಹುಃ ಇ.ಕೆ.ಅಬುಬಕ್ಕರ್ ಮುಸ್ಲಿಯಾರ್ ರವರ ಮತ್ತು ದಾರುಲ್ ಹುದಾ ಇ.ಕೆ.ಹಸನ್ ಮುಸ್ಲಿಯಾರ್ ರವರ ಸಹೋದರ ಹಾಗೂ ಈ ಹಿಂದೆ ಪುತ್ತೂರಿನ ಕೇಂದ್ರ ಜುಮಾ ಮಸೀದಿಯಲ್ಲಿ ಕೆಲವು ವರ್ಷಗಳ ಕಾಲ ಮುದರ್ರಿಸ್ ರಾಗಿ ಸೇವೆಗೈದ ಮರ್ಹೂಮ್ ಟಿ.ಎಂ. ಸಯೀದ್ ದಾರಿಮಿ ಉಸ್ತಾದ್ ಹಾಗೂ ಟಿ.ಎಂ.ಹನೀಫ್ ಮುಸ್ಲಿಯಾರ್, ಇಕ್ಬಾಲ್ ಮುಸ್ಲಿಯಾರ್, ಝುಬೈರ್ ಮುಸ್ಲಿಯಾರ್ ರವರ ತಂದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.