(www.vknews.in)ಬಿ.ಬಿ.ಕೆ ಸ್ಪೋರ್ಟ್ಸ್ ಕ್ಲಬ್ ಕೋಡಪದವು ಮತ್ತು ಎಮರ್ಜೆನ್ಸಿ ಟೀಮ್ ಕೋಡಪದವು ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ( ರಿ) ಜಂಟಿ ಆಶ್ರಯದಲ್ಲಿ ಕರ್ನಾಟಕ ಕೆ.ಎಸ್.ಹೆಗ್ಡೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಇದರ ಸಹಯೋಗದೊಂದಿಗೆ ಸಮಾಜದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಶರೀಪ್ ತಾಳಿತ್ತನೂಜಿ ಮದಕ,ಖಾದರ್ ಕುಕ್ಕಿಲ,ಆಟೋ ಚಾಲಕರಾಗಿ ಸೇವೆ ಸಲ್ಲಿಸಿ ದಿವಂಗತರಾದ ಶಿವರಾಮ ನಾಯ್ಕ ದಿವಾಣ ಇವರ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರವ ದ.ಕ.ಜಿ.ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಡಪದವು ಎಂಬಲ್ಲಿ ಯಶಸ್ವಿಯಾಗಿ ನಡೆಯಿತು.
ರಾಜಕೀಯ ರಹಿತವಾದ ರಕ್ತದಾನ ಶಿಬಿರವನ್ನು ಊರಿನ ಸರ್ವದರ್ಮೀಯ ಹಿರಿಯರ ಸಮ್ಮುಖದಲ್ಲಿ ಆರ್. ಜೆ.ಎಂ. ಕೋಡಪದವು ಮಸೀದಿಯ ಖತೀಬರಾದ ಅಬ್ದುಲ್ ಸಲೀಂ ಮದನಿ ದುವಾಶಿರ್ವಾಚನೆಯೊಂದಿಗೆ ಉದ್ಘಾಟಿಸಿದರು.ಉದ್ಘಾಟನ ಸಮಾರಂಭದ ವೇದಿಕೆಯಲ್ಲಿ ಬೈಲು ಗೋಪಾಲಕೃಷ್ಣ ಭಟ್,ಅಬ್ದುಲ್ಲಾ ಕುಕ್ಕಿಲ, ರಕ್ತದಾನ ಶಿಬಿರದಲ್ಲಿ ಶುಭಕೋರಿ ಮಾತಾಡಿ ಜಾತಿಮತ ಬೇದವಿಲ್ಲದೆ ಆಸ್ಪತೆಗಳಲ್ಲಿ ರಕ್ತದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೈಜೋಡಿಸುವ ಪ್ರಯತ್ನ ಮಾಡಬೇಕು ಎಂದರು. ಸ್ಥಳೀಯ ಗ್ರಾ.ಪಂಚಾಯತ್ ಸದಸ್ಯ ಹರ್ಷದ್ ಕುಕ್ಕಿಲ,ಇಬ್ರಾಹಿಂ ಕುಕ್ಕಿಲ,ಸುಲೈಮಾನ್ ತಾಳಿತ್ತನೂಜಿ,ಪಾತ್ರತೋಟ ಜುಮಾ ಮಸೀದಿ ಅದ್ಯಕ್ಷರಾದ ಅಬ್ದುಲ್ ಕರೀಂ ಕಂಪದಬೈಲು,ರಹ್ಮಾನೀಯ ಜುಮಾ ಮಸೀದಿ ಕೋಡಪದವು ಅದ್ಯಕ್ಷರಾದ ಅಬೂಬಕ್ಕರ್,ರಹೀಂ ಕೋಡಪದವು,ಗುತ್ತಿಗೆದಾರ ಪ್ರೀತಂ ಡಿ.ಸೋಜಾ,ಎಸ್.ಡಿ.ಎಂ.ಸಿ ಕೋಡಪದವು ಇದರ ಅದ್ಯಕ್ಷ ಉಮ್ಮರ್ ಪಾರೂಕು ಟೆಕ್ನಿಕ್ ಸಹಿತ ಹಿರಿ ಕಿರಿಯ ಗೌರವ್ವನ್ವಿತ ಮುಖ್ಯ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕ್ರೀಡೆಯೊಂದಿಗೆ ಸಮಾಜಿಕ ಕಾರ್ಯಗಳಲ್ಲಿ ಕಾರ್ಯಚರಿಸುತ್ತಿರುವ ಬಿ.ಬಿ.ಕೆ.ಸ್ಪೋರ್ಟ್ಸ್ ಕ್ಲಬ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರ ಜಾತಿ ಮತ ನೋಡದೆ ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗಳಿಗೆ ಅ್ಯಂಬುಲೆನ್ಸ್,ಆರ್ಥಿಕವಾಗಿ ಸ್ಪಂದಿಸಿ ಸಹಾಯ ಮಾಡುತ್ತಾ ಬಂದಿರುವ ಎಮರ್ಜೆನ್ಸಿ ಟೀಮ್ ಕೋಡಪದವು ಎರಡೂ ತಂಡವೂ ಜಂಟಿಯಾಗಿ ಕಾರ್ಯಚರಿಸುವುದನ್ನು ಅತಿಥಿಗಳು ಸ್ಮರಿಸಿಕೊಂಡರು.
ಬಿ.ಬಿ.ಕೆ. ಹಾಗೂ ಎಮರ್ಜೆನ್ಸಿ ತಂಡದ ಕಾರ್ಯಚಟುವಟಿಕೆಗಳನ್ನು ಗೌರವಿಸಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ತಂಡದ ಮ್ಯಾನೆಜ್ಮೆಂಟ್ ವಿಬಾಗದ ಮುಖ್ಯಸ್ಥರು ಎರಡೂ ತಂಡಗಳಿಗೂ ಸ್ಮರಣಿಕೆ ನೀಡಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ರಕ್ತನಿಧಿ ಮುಖ್ಯಸ್ಥರನ್ನು ಹಾಗೂ ಸಿಬ್ಬಂದಿಗಳನ್ನು ಮತ್ತು ಬ್ಲಡ್ ಹೆಲ್ಪ್ ಲೈನ್ ತಂಡದವರನ್ನೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಾರ್ವಜನಿಕವಾಗಿ ಚಾಹ ತಿಂಡಿ,ಹಣ್ಣು ಹಂಪಲುಗಳು,ಸಿಹಾಳ ,ಉಟೋಪಚಾರ ಸೇರಿ ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಸುಂದರವಾಗಿ ನಡೆದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಬಿ.ಬಿ.ಕೆ ಹಾಗೂ ಎಮರ್ಜೆನ್ಸಿ ತಂಡದ ಪ್ರತಿನಿಧಿಗಳಾದ ರಿಯಾಝ್ ತಾಳಿತ್ತನೂಜಿ,ಅರ್ಶದ್ ಸರವು,ಸಿದ್ದೀಕ್ ಸರವು,ಸಿರಾಜ್ ಮದಕ,ಶಮ್ಮಾಸ್ ಕಂಪದಬೈಲು,ಇಮ್ರಾನ್ ಬೊನ್ಯಕುಕ್ಕು,ಹಂಝ ತಾಳಿತ್ತನೂಜಿ, ಕಬೀರ್. ಟಿ,ಯಾಸೀರ್ ಕುಕ್ಕಿಲ,ಗುತ್ತಿಗೆದಾರ ಪಾರೂಕು ಕುಕ್ಕಿಲ, ಗ್ರಾಮ ಪಂಚಾಯತ್ ಸದಸ್ಯರುಗಳು,ಮಾಜಿ ಸದಸ್ಯರುಗಳು,ಕೋಡಪದವು ಶಾಲೆಯ ಎಸ್.ಡಿ.ಎಂ.ಸಿ ಅದ್ಯಕ್ಷರುಗಳು,ಎರಡೂ ಸಂಘಟನೆಯ ಸರ್ವ ಸದಸ್ಯರುಗಳು ಉಪಸ್ಥಿತರಿದ್ದರು.ಸಭೆಯನ್ನು ಅಬೂಬಕ್ಕರ್ ಸಿದ್ದೀಕ್ ಕುಕ್ಕಿಲ ಸ್ವಾಗತಿಸಿ ಹಸೈನಾರ್ ತಾಳಿತ್ತನೂಜಿ ಧನ್ಯವಾದ ತಿಳಿಸಿದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.