ಚಂಡೀಗಢ (ವಿಶ್ವ ಕನ್ನಡಿಗ ನ್ಯೂಸ್) : 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ವಿಡಿಯೋ ಮೂಲಕ ಬೆದರಿಕೆ ಹಾಕಿದ ವಿವಾದಿತ ದೇವಮಾನವ ಅಮರಪುರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ‘ಜಿಲೇಬಿ ಬಾಬಾ’ ಎಂದೇ ಖ್ಯಾತರಾಗಿರುವ ಅಮರಪುರಿ, ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣ ಮತ್ತು ಇತರ ಎರಡು ಅತ್ಯಾಚಾರ ಪ್ರಕರಣಗಳಲ್ಲಿ ಹರಿಯಾಣ ಫತೇಹಾಬಾದ್ ತ್ವರಿತ ನ್ಯಾಯಾಲಯವು ದೋಷಿ ಎಂದು ತೀರ್ಪು ನೀಡಿದೆ.
ಜಲೇಬಿ ಬಾಬಾ ತನ್ನನ್ನು ಸಂಪರ್ಕಿಸಿದ ಮಹಿಳೆಯರಿಗೆ ಮಾದಕದ್ರವ್ಯ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದನು. ಈ ಎಲ್ಲ ದೃಶ್ಯಗಳನ್ನು ಆತ ತನ್ನ ಫೋನ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. 2018ರ ಜುಲೈನಲ್ಲಿ ಬಾಬಾ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಬಾಬಾನ ವಿಡಿಯೋ ಕೂಡ ಪೊಲೀಸರಿಗೆ ಸಿಕ್ಕಿದೆ.
ಆಶ್ರಮಕ್ಕೆ ಬಂದ ಅನೇಕ ಹುಡುಗಿಯರು ಮತ್ತು ಮಹಿಳೆಯರ ಮೇಲೆ ಆತ ಲೈಂಗಿಕ ದೌರ್ಜನ್ಯ ಎಸಗಿದ್ದು, ದೃಶ್ಯಗಳನ್ನು ಚಿತ್ರೀಕರಿಸುವ ಮೂಲಕ ಬೆದರಿಕೆ ಹಾಕಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನಂತರ ತೋಹನ ಇನ್ಸ್ ಪೆಕ್ಟರ್ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಅಮರಪುರಿಯನ್ನು ಬಂಧಿಸಿದೆ. ಆತನ ಬಂಧನದ ನಂತರ, ಪೊಲೀಸರು ಜಲೇಬಿ ಬಾಬಾ ಅವರ ಮೊಬೈಲ್ ಫೋನ್ನಿಂದ 120 ಕ್ಕೂ ಹೆಚ್ಚು ಅಶ್ಲೀಲ ವೀಡಿಯೊಗಳನ್ನು ವಶಪಡಿಸಿಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.