ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಮ್ಯಾಟ್ರಿಮೋನಿಯಲ್ ಸೈಟ್ ಗಳ ಮೂಲಕ ನಕಲಿ ಪ್ರೊಫೈಲ್ ತಯಾರಿಸಿ ಮದುವೆ ಪ್ರಸ್ತಾಪ ಮಾಡಿದ್ದ ಯುವಕನನ್ನು ಬಂಧಿಸಲಾಗಿದೆ. ಮುಹಮ್ಮದ್ ಫಝಲ್ (36) ಬಂಧಿತ ಆರೋಪಿ. ಈತ ಅಮಲ್ ಹೆಸರಿನಲ್ಲಿ ಯುವತಿಯರಿಗೆ ಆಮಿಷ ಒಡ್ಡುತ್ತಿದ್ದ, ಸುಳ್ಳು ಹೆಸರುಗಳಲ್ಲಿ ಪಾಸ್ಪೋರ್ಟ್ ಮತ್ತು ಆಧಾರ್ ಸೃಷ್ಟಿಸಿ ತಾನು ಪೈಲಟ್ ಎಂದು ಹೇಳಿಕೊಂಡು ಯುವತಿಯರನ್ನು ತನ್ನ ಬಲೆಗೆ ಬೀಳಿಸುತ್ತಿದ್ದ.
ಈತ ಅಮಲ್ ಎಂಬ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ಸೈಟ್ ಗಳಲ್ಲಿ ರಿಜಿಸ್ಟರ್ ಮಾಡುವ ಮೂಲಕ ಶ್ರೀಮಂತ ಹುಡುಗಿಯರನ್ನು ಹುಡುಕಿ ಅವರ ಜೊತೆ ಮದುವೆ ಪ್ರಸ್ತಾಪಗಳನ್ನು ಮಾಡಿದ್ದ. ಹಲವು ಯುವತಿಯರನ್ನು ವಂಚಿಸಿ ಹಣ ದೋಚಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ವರಂತರಪಿಳ್ಳಿಯ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ. ಮಹಿಳೆಯಿಂದ 1,10,000 ರೂ ಪಡೆದಿದ್ದು ಯುವತಿ ಫೋನ್ ಮೂಲಕ ವಾಪಸ್ ಕೇಳಿದಾಗಲೆಲ್ಲ ಆಟವಾಡಿಸುತಿದ್ದಾಗ ಈಕೆ ಅನುಮಾನಗೊಂಡಿದ್ದಾಳೆ. ನಂತರ ಅವರ ವಿರುದ್ಧ ದೂರು ದಾಖಲಾಗಿತ್ತು.
ಪೊಲೀಸರ ಪ್ರಕಾರ, ಎರ್ನಾಕುಲಂನ ಪರವೂರ್ನ ಮಹಿಳೆಗೆ 7 ಲಕ್ಷ ರೂಪಾಯಿ ವಂಚಿಸಲಾಗಿದೆ ಮತ್ತು ಕೊಲ್ಲಂ, ಎರ್ನಾಕುಲಂ, ಮಲಪ್ಪುರಂ ಮತ್ತು ವಯನಾಡ್ನಲ್ಲಿ ಇದೇ ರೀತಿಯ ವಂಚನೆಗಳನ್ನು ನಡೆಸಲಾಗಿದೆ. ಕೊಲ್ಲಂ ಸೈಬರ್ ಪೊಲೀಸರು ಶಂಕಿತನನ್ನು ಪಲರಿವಟ್ಟದಿಂದ ಬಂಧಿಸಿದ್ದು, ವರಂತರಪಿಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹುಡುಗಿಯರು ಈತನ ವಿರುದ್ಧ ದೂರು ನೀಡಲಿದ್ದಾರೆ ಎಂದು ಪೊಲೀಸರು ನಂಬಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.