(www.vknews.in) ಜೆಡಿಎಸ್ ಮುಲ್ಕಿ ಬ್ಲಾಕ್ ಸಮಿತಿ ಸಭೆಯು ದಿನಾಂಕ ಜನವರಿ 15ರಂದು ಕೆ.ಎಸ್. ರಾವ್ ನಗರ ಮುಲ್ಕಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಧ್ಯಕ್ಷ ಇಕ್ಬಾಲ್ ಅಹ್ಮದ್ ಮುಲ್ಕಿಯವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯ ಆರಂಭದಲ್ಲಿ ಇತ್ತೀಚೆಗೆ ಮೃತಪಟ್ಟ ಜಿಲ್ಲಾ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರರಾದ ಶ್ರೀ ಸುಶೀಲ್ ನೋರೋನ್ಹರವರಿಗೆ ಶ್ರದ್ದಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ತದನಂತರ ಈ ಸಭೆಯನ್ನುದ್ದೇಶಿಸಿ ಮಾತನಾಡಿದ ಮೂಲ್ಕಿ -ಮೂಡಬಿದ್ರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಡಾ. ಅಮರಶ್ರೀ ಅಮರನಾಥ ಶೆಟ್ಟಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತುಕೊಡಬೇಕೆಂದು ಮನವಿ ಮಾಡಿದರು. ಈ ಹಿಂದೆ ನನ್ನ ತಂದೆ ದಿವಂಗತ ಶ್ರೀ. ಅಮರನಾಥ ಶೆಟ್ಟಿಯವರಿಗೆ ನೀವು ನೀಡುತ್ತಿದ್ದ ಸಹಕಾರ ಹಾಗೂ ಬೆಂಬಲ ನಾವು ಮರೆಯಲು ಅಸಾಧ್ಯ. ಅದೇ ರೀತಿ ಮುಂದೆಯೂ ನಿಮ್ಮ ಆಶೀರ್ವಾದ, ಸಹಾಯ ಸಹಕಾರ ನನ್ನ ಹಾಗೂ ನಮ್ಮ ಪಕ್ಷದ ಮೇಲಿರಲಿ ಎಂದು ಮನವಿ ಮಾಡಿದಾಗ ಸಭೆಯಲ್ಲಿ ಒಕ್ಕೊರಳಿನ ಬೆಂಬಲ ವ್ಯಕ್ತವಾಯಿತು. ಇಕ್ಬಾಲ್ ಅಹ್ಮದ್ ಮೂಲ್ಕಿಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಈ ಸಲ ಕುಮಾರಣ್ಣನವರು ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಹೇಳಿದರು ಮತ್ತು ಪಂಚರತ್ನ ಯಾತ್ರೆ ಜಿಲ್ಲಾ ಪ್ರವೇಶದ ಬಗ್ಗೆ ಮಾಹಿತಿಯನ್ನಿಟ್ಟರು.
ಈ ಸಭೆಯಲ್ಲಿ ಶಶಿಪ್ರಭಾ ಶೆಟ್ಟಿಯವರ ಮಾರ್ಗದರ್ಶನದಲ್ಲಿ, ಬಿಜೆಪಿ ಯುವನಾಯಕ ಅರ್ಜುನ್ ರವರ ನೇತೃತ್ವದಲ್ಲಿ ಹಲವಾರು ಮಂದಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು, ಇವರೆಲ್ಲಾರನ್ನು ಡಾ. ಅಮರಶ್ರೀ ಅಮರನಾಥ ಶೆಟ್ಟಿಯವರು ಪಕ್ಷದ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು. ಇದೇ ವೇಳೆ ಪಕ್ಷದ ಸದಸ್ಯತ್ವ ಅಭಿಯಾನಕ್ಕೆ ಚಾಲನೆಯನ್ನು ನೀಡಲಾಯ್ತು.
ಸಭೆಯಲ್ಲಿ ಮೂಲ್ಕಿ-ಮೂಡಬಿದ್ರಿ ಕ್ಷೇತ್ರದ ಮಹಿಳಾ ಜೆಡಿಎಸ್ ಸಮಿತಿ ಅಧ್ಯಕ್ಷೆ ಶ್ರೀಮತಿ ಶಶಿಪ್ರಭಾ ಶೆಟ್ಟಿ, ಮಾಜಿ ಕೌನ್ಸಿಲರ್ ಲಕ್ಷ್ಮಿಬಾಯಿ, ದ.ಕ. ಜಿಲ್ಲಾ ಯುವಜನತಾದಳದ ಉಪಾಧ್ಯಕ್ಷ ಆಸೀಫ್ ತೋಡಾರ್, ಮುಖಂಡರುಗಳಾದ ನೂರುಲ್ಲಾ ಶೇಕ್, ನಿಸಾರ್ ಅಹಮದ್, ಬಷೀರ್ ಅಹಮದ್, ಬಿ.ಎಂ. ಬಾವ, ಮನ್ಸೂರ್, ಸಲಾಂ, ಮಶಾಕ್ ಸಾಹೇಬ್, ಸಂಜೀವ ಕಟೀಲ್, ಅಬ್ದುಲ್ಲಾ ಕಿನ್ನಿಗೋಳಿ, ರೇಷ್ಮಾ ಹಳೆಯಂಗಡಿ, ಜ್ಯೋತಿ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಮುಲ್ಕಿ ಬ್ಲಾಕ್ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.