ಕೋಝೀಕ್ಕೋಡ್ (ವಿಶ್ವ ಕನ್ನಡಿಗ ನ್ಯೂಸ್) : ಯುವ ವೈದ್ಯೆಯೊಬ್ಬರು ಕೋಝೀಕ್ಕೋಡ್ ನಲ್ಲಿ ಮೃತರಾಗಿ ಪತ್ತೆಯಾಗಿದ್ದಾರೆ. ವಯನಾಡ್ ನ ಕಾನಿಯಂಬಟ್ಟ ನಿವಾಸಿ ತನ್ಸಿಯಾ (25) ಮೃತ ದುರ್ದೈವಿ. ಅವರು ಕೋಝಿಕೋಡ್ ನ ಮಲಬಾರ್ ವೈದ್ಯಕೀಯ ಕಾಲೇಜಿನ ಪಿಜಿ ವಿದ್ಯಾರ್ಥಿನಿ.
ಪಲಾಝಿಯ ತನ್ನ ಸ್ನೇಹಿತೆಯ ಫ್ಲಾಟ್ ನಲ್ಲಿ ತನ್ಸಿಯಾ ಶವವಾಗಿ ಪತ್ತೆಯಾಗಿದ್ದರು. ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೃತದೇಹವನ್ನು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ತನ್ಸಿಯಾ ಮೂರ್ಛೆರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.