ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮಂಗಳೂರಿನ ಹೊಟೇಲ್ ಕೊಠಡಿಯಲ್ಲಿ ನಾಲ್ವರ ಕುಟುಂಬವೊಂದು ಶವವಾಗಿ ಪತ್ತೆಯಾಗಿದೆ. ತಂದೆ, ತಾಯಿ ಮತ್ತು ಅವಳಿ ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರಿನ ವಿಜಯನಗರ ಮೂಲದ ದೇವೇಂದ್ರ (48), ಪತ್ನಿ ನಿರ್ಮಲಾ (48), ಮಕ್ಕಳಾದ ಚೈತನ್ಯ (9) ಮತ್ತು ಚೈತ್ರ (9) ಮೃತರು. ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿರುವ ಖಾಸಗಿ ಲಾಡ್ಜ್ನಲ್ಲಿ ಮೃತದೇಹಗಳು ಪತ್ತೆಯಾಗಿವೆ. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ಪ್ರಾಥಮಿಕ ತೀರ್ಮಾನ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.