ಮಲಪ್ಪುರಂ (ವಿಶ್ವ ಕನ್ನಡಿಗ ನ್ಯೂಸ್) : ತನೂರಿನ ದೋಣಿ ಅಪಘಾತದಲ್ಲಿ ಮೃತಪಟ್ಟ ಇಪ್ಪತ್ತೆರಡು ಜನರಲ್ಲಿ, ತಾಯಿ ಮತ್ತು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಸೇರಿದ್ದಾರೆ. ಮಲಪ್ಪುರಂ ಚೆಟ್ಟಿಪಾಡಿಯಲ್ಲಿ ಆಯೆಶಾಬಿ (38) ಮತ್ತು ಆಕೆಯ ಮಕ್ಕಳಾದ ಆದಿಲಾ ಶೆರಿನ್ (13), ಅರ್ಶನ್ (3) ಮತ್ತು ಅದ್ನಾನ್ (10) ಮೃತರು.
ಅವರ ಮತ್ತೋರ್ವ ಪುತ್ರ ಚಿಂತಾಜನಕ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆಯೆಶಾಬಿ ತಾಯಿ ಸೀನತ್ ಕೂಡ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿ ಮತ್ತು ಅವರ ಮಕ್ಕಳು ಸೇರಿದಂತೆ ಆರು ಜನರ ತಂಡವು ವಿಹಾರಕ್ಕೆಂದು ತಾನೂರಿಗೆ ತೆರಳಿತ್ತು.
ಐಶಾಬೀ ಸಮೀಪದ ಬಟ್ಟೆ ಅಂಗಡಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಸ್ವಂತ ಬಲದಿಂದ ಕುಟುಂಬವನ್ನು ಮುಂದೆ ಸಾಗಿಸಲು ಶ್ರಮಿಸಿದ ಐಶಾಬಿ ಮತ್ತು ಅವರ ಕುಟುಂಬದವರ ದುರಂತ ಸಾವನ್ನು ಸ್ಥಳೀಯರು ಯಾರಿಗೂ ನಂಬಲು ಸಾಧ್ಯವಾಗಲಿಲ್ಲ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.