ಚೆನ್ನೈ (ವಿಶ್ವ ಕನ್ನಡಿಗ ನ್ಯೂಸ್) : ಮಹಿಳೆಯರನ್ನು ಬೆತ್ತಲೆಯಾಗಿ ಕಾಣುವುದಾಗಿ ಸುಳ್ಳು ಹೇಳಿ 1 ಕೋಟಿ ರೂಪಾಯಿಗೆ ಕನ್ನಡಕ ಮಾರಾಟ ಮಾಡಿದ್ದ ಉದ್ಯಮಿ ಸೇರಿದಂತೆ ನಾಲ್ವರನ್ನು ಚೆನ್ನೈನಲ್ಲಿ ಬಂಧಿಸಲಾಗಿದೆ. ಆರೋಪಿಗಳು ಸುಳ್ಳು ಭರವಸೆ ನೀಡಿ ಶ್ರೀಮಂತ ಉದ್ಯಮಿಗಳನ್ನು ಟಾರ್ಗೆಟ್ ಮಾಡುತ್ತಿದ್ದರು.
ಕನ್ನಡಕ ಹೇಗೆ ಕೆಲಸ ಮಾಡುತ್ತದೆ ಎಂಬ ವಿಡಿಯೋಗಳನ್ನು ತೋರಿಸಿ ಈ ವಂಚನೆ ನಡೆದಿದೆ. ಗ್ರಾಹಕರನ್ನು ಮೂರ್ಖರನ್ನಾಗಿಸಲು ಮಾಡೆಲ್ಗಳನ್ನು ಕತ್ತಲ ಕೋಣೆಯಲ್ಲಿ ಬೆತ್ತಲೆಯಾಗಿ ಪೋಸ್ ಕೊಡಲು ವ್ಯವಸ್ಥೆ ಮಾಡಲಾಗಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಆರು ಗ್ಲಾಸ್ಗಳನ್ನು ಮಾರಾಟ ಮಾಡಿರುವುದಾಗಿ ಗುಂಪು ಹೇಳಿಕೊಂಡಿದೆ.
ಬೆಂಗಳೂರಿನ 39 ವರ್ಷದ ಉದ್ಯಮಿ ನೇತೃತ್ವದ ಗ್ಯಾಂಗ್ ಶ್ರೀಮಂತ ಉದ್ಯಮಿಗಳನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಗಳೂರು ಮೂಲದ ಆರ್.ಸೂರ್ಯ ಮತ್ತು ಆತನ ಸಹಾಯಕರಾದ ಗುಬಾಬಿಬ್ (37), ಜಿತು ಜಯನ್ (24) ಮತ್ತು ಎಸ್.ಇರ್ಷಾದ್ (21) ಬಂಧಿತರು. ಕೋಡಂಬಾಕ್ಕಂನ ಹೋಟೆಲ್ನಿಂದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.