ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರದ ಯೋಜನಗೆಗಳಿಗೆ ಬ್ರೇಕ್ ಬೀಳಲಿದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನೆಟ್ಟಿಗರು ಹಲವು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಕೇಂದ್ರ ಯೋಜನೆಗಳು ಜೆಪಿ ನಡ್ಡಾ ಅವರ ಪ್ರಿತ್ರಾರ್ಜಿತ ಆಸ್ತಿಯಲ್ಲ. ಅವರು ತಮ್ಮ ಜೇಬಿನಿಂದ ಈ ಯೋಜನೆಗಳನ್ನು ಕನ್ನಡಿಗರಿಗೆ ಕೊಡುವುದಿಲ್ಲ ಎಂದು ಓರವರು ಹೇಳಿದ್ದಾರೆ.
ಶ್ರೀನಿವಾಸ್ ಎಂಬವವರು ಈ ಹಿಂದಿ ಗೊಡ್ಡುಗಳ ಬೆದರಿಕೆ ಅತಿಯಾಯ್ತು, ಚುನಾವಣಾ ಆಯೋಗ ಏನಾಗಿದೆ. ಅವರ ಈ ಹೇಳಿಕೆ ಕರ್ನಾಟಕದ ಸ್ವಾಭಿಮಾನವನ್ನು ಅಣಕ ಮಾಡುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ರಾಮಕೃಷ್ಣ ಎಂಬ ಬಳಕೆದಾರರು ನಿಮ್ಮ ಯೋಜನೆಗಳೇ ಬೇಡ. ನಮ್ಮ ಜಿಎಸ್ಟಿಯನ್ನು ನಿಮಗೆ ಕೊಡುವುದಿಲ್ಲ. ನಮ್ಮ ಕರ್ನಾಟಕ 5 ವರ್ಷದಲ್ಲಿ ಅಭಿವೃದ್ಧಿಯಲ್ಲಿ ನಂ. 1 ರಾಜ್ಯವಾಗಲಿದೆ ಎಂದು ಹೇಳಿದ್ದಾರೆ. ಭಾಗ್ಯ ಸಿಎಚ್ ಎಂಬ ಬಳಕೆದಾರರು ಕೇಂದ್ರದ ಯೋಜನೆಗಳು ಅವರ ಮನೆಯ ಆಸ್ತಿಯಲ್ಲ. ಜನರ ಹಕ್ಕು ಅದು ಎಂದು ಹೇಳಿದ್ದಾರೆ.
ದೊಡ್ಡಬಳ್ಳಾಪುರ ವೆಂಕಿ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರು, ನಡ್ಡಾನ ಹೇಳಿಕೆಯಲ್ಲಿ ಮೊಂಡುತನ, ಹುಚ್ಚುತನ ತುಳುಕಾಡುತ್ತಿದೆ. ಕೇಂದ್ರ ಹಾಗೂ ರಾಜ್ಯದ ಸಂಬಂಧವನ್ನು ಹದಗೆಡಿಸುತ್ತದೆ. ಜಿಎಸ್ಟಿ ತೆರಿಗೆ ಶ್ರೇಣಿ ನಿರ್ಧಾರದ ಅಧಿಕಾರ ರಾಜ್ಯಗಳು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.
ಚಂದ್ರಶೇಖರ್ ಸಿರಿವಂತೆ ಎಂಬುವವರು ಈಗೆಲ್ಲಿ ಬರುತ್ತಿವೆ ಕೇಂದ್ರದ ಯೋಜನೆಗಳು, ಯೋಜನೆಗಳೇ ಇಲ್ಲದ ಸರ್ಕಾರ ತಾನೇ ಇದು ಎಂದಿದ್ದಾರೆ. ಮೋಹನ್ ಮೈಸೂರು ಎಂಬುವರು ಯುದ್ಧಕ್ಕೆ ಮುಂಚೆಯೇ ಸೋಲುತ್ತೀವಿ ಎನ್ನುವ ಭಯ ಶುರುವಾಗಿದೆ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.