ಭಟ್ಕಳ (ವಿಶ್ವ ಕನ್ನಡಿಗ ನ್ಯೂಸ್) : ಬೈಕ್ ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಸಾಗರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಭಟ್ಕಳದ ಉಸ್ಮನಿಯ ಕಾಲನಿ ನಿವಾಸಿ ಹಿಸಾಮುದ್ದೀನ್ ಶರೀಫ್ (30) ಎಂದು ಗುರುತಿಸಲಾಗಿದೆ.
ಬೈಕ್ ನ ಹಿಂಬದಿ ಸವಾರ ಮೊಹಮ್ಮದ್ ಕುತುಬ್ (20) ಅವರನ್ನು ಗಂಭೀರ ಗಾಯಗಳೊಂದಿಗೆ ಕುಂದಾಪುರದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರು ಜನ ಸ್ನೇಹಿತರು 3 ಬೈಕ್ ಗಳಲ್ಲಿ ಸಾಗರ ರಸ್ತೆಯ ಕಡೆ ತೆರಳುವಾಗ ಟೂರಿಸ್ಟ್ ಕಾರು ಬೈಕ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.