(ವಿಶ್ವ ಕನ್ನಡಿಗ ನ್ಯೂಸ್) : ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಚುನಾವಣೆಯ ತಳಹದಿಯ ಮೇಲೆ ಕಟ್ಟಲಾಗಿದೆ. ನಮ್ಮ ಸಂಸತ್ತು ಮತ್ತು ಶಾಸಕಾಂಗಗಳು ಜನರಿಂದ, ಜನರಿಗಾಗಿ ,ಜನರಿಗೋಸ್ಕರ ಎಂಬ ನಿಯಮದಡಿಯಲ್ಲಿ ರೂಪಿಸಲಾಗಿದೆ. ಸಂವಿಧಾನವು ನಮಗೆ ಬೇಕಾದವರನ್ನು ಆಯ್ಕೆ ಮಾಡುವ ಹಕ್ಕನ್ನು ಮತ್ತು ಬದಲಾವಣೆ ಮಾಡುವ ಹಕ್ಕನ್ನು ಮತದಾನದ ಮೂಲಕ ನೀಡಿದೆ.
ಮತದಾನ ಮಾಡದೇ ಇದ್ದರೆ ಅದೇ ಪಕ್ಷ ಮತ್ತೆ ಐದು ವರ್ಷಗಳ ಕಾಲ ಆಡಳಿತ ನಡೆಸಬಹುದು, ದಿನದ ಕೊನೆಯಲ್ಲಿ, ದೇಶವು ಕೆಟ್ಟ ಸರ್ಕಾರದೊಂದಿಗೆ ಸಿಲುಕಿಕೊಂಡರೆ, ತಪ್ಪಾಗಿ ಮತ ಚಲಾಯಿಸಿದ್ದಕ್ಕಾಗಿ ಅಥವಾ ಮತದಾನ ಮಾಡದಿದ್ದಕ್ಕಾಗಿ ಪರಿತಪಿಸುವ ದಿನಗಳು ಬರಬಹುದು. ಅವುಗಳನ್ನು ತಪ್ಪಿಸಲು ಹಾಗೂ ಪ್ರಜಾಪ್ರಭುತ್ವ ಇನ್ನಷ್ಟು ಬಲಿಷ್ಠಗೊಳ್ಳಲು ಜಾತ್ಯಾತೀತ ಮನೋಭಾವ ಉಳ್ಳ ಪಕ್ಷಕ್ಕೆ ಮತ ಚಲಾಯಿಸಿ ಸಂವಿಧಾನದ ಆಶಯಗಳನ್ನು ಉಳಿಸಲು ತಪ್ಪದೇ ಮತ ಚಲಾಯಿಸಿ.
ಅಲ್ ಹಾಜಿ ಅಬ್ದುಲ್ ಹಮೀದ್ ದಾರಿಮಿ ಕಾರ್ಯದರ್ಶಿ ಜಮಿಯತ್ತುಲ್ ಖುತ್ಬಾ ಕೇಂದ್ರ ಸಮಿತಿ, ಖತೀಬರು, ಮುಹಿಯ್ಯದ್ದೀನ್ ಜಮ್ಮಾ ಮಸೀದಿ ಸಂಪ್ಯ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.