ಇಂಫಾಲ (ವಿಶ್ವ ಕನ್ನಡಿಗ ನ್ಯೂಸ್) : ಮಣಿಪುರದಲ್ಲಿ ಘರ್ಷಣೆ ಹಿನ್ನೆಲೆಯಲ್ಲಿ ಮತ್ತೆ ನಿಷೇಧಾಜ್ಞೆ ಘೋಷಿಸಲಾಗಿದೆ. ರಾಜಧಾನಿ ಇಂಫಾಲ್ನ ನ್ಯೂ ಚೆಕಾನ್ ಪ್ರದೇಶದಲ್ಲಿ ಸಂಘರ್ಷ ನಡೆದಿದೆ. ಮೇಟಿ-ಕುಕಿ ಬಣಗಳು ಘರ್ಷಣೆಯಾಗುತ್ತಿದ್ದವು. ಎರಡು ಸ್ಥಳಗಳಲ್ಲಿ ಸಂಘರ್ಷ ಏರ್ಪಟ್ಟಿತ್ತು. ಈ ಪ್ರದೇಶಗಳಲ್ಲಿ ಸೇನೆ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಶುಕ್ರವಾರದವರೆಗೆ ರಾಜ್ಯದಲ್ಲಿ ಇಂಟರ್ನೆಟ್ ನಿಷೇಧಿಸಲಾಗಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಮೀಸಲಿಟ್ಟ ಜಾಗದ ವಿವಾದದಿಂದ ಘರ್ಷಣೆ ನಡೆದಿದೆ. ನ್ಯೂ ಲ್ಯಾಂಪ್ಲಿ ಪ್ರದೇಶದಲ್ಲಿ ಹಲವಾರು ಮನೆಗಳ ಮೇಲೆ ದಾಳಿ ನಡೆಸಲಾಗಿದೆ. ಇಲ್ಲಿ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಸಂಘರ್ಷ ರಾಜ್ಯಾದ್ಯಂತ ವ್ಯಾಪಿಸುವ ಆತಂಕವೂ ಇದೆ. ಇದರ ಬೆನ್ನಲ್ಲೇ ಸೇನೆಯು ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಕಳೆದೊಂದು ವಾರದಿಂದ ಮಣಿಪುರ ಶಾಂತವಾಗಿದ್ದು, ಮತ್ತೆ ದಾಳಿ ನಡೆದಿದೆ.
#WATCH | Abandoned houses set ablaze by miscreants in New Lambulane area in Imphal in Manipur. Security personnel on the spot. pic.twitter.com/zENI5nuMyM — ANI (@ANI) May 22, 2023
#WATCH | Abandoned houses set ablaze by miscreants in New Lambulane area in Imphal in Manipur. Security personnel on the spot. pic.twitter.com/zENI5nuMyM
— ANI (@ANI) May 22, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.