ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾತ್ರಿ ಲಾರಿನಲ್ಲಿ ಪ್ರಯಾಣಿಸಿದ್ದಾರೆ. ಹರಿಯಾಣದ ಮುರ್ತಾಲ್ನಿಂದ ಅಂಬಾಲದವರೆಗೆ ರಾಹುಲ್ ಪ್ರಯಾಣ. ಸೋಮವಾರ ರಾತ್ರಿ ದೆಹಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದ ವೇಳೆ ರಾಹುಲ್ ಟ್ರಕ್ನಲ್ಲಿ ಪ್ರಯಾಣಿಸುತ್ತಿದ್ದರು.
ರಾತ್ರಿ 11 ಗಂಟೆ ಸುಮಾರಿಗೆ ರಾಹುಲ್ ಮುರ್ತಾಲ್ ತಲುಪಿದರು. ನಂತರ ರಾಹುಲ್ ಇಲ್ಲಿಂದ ಟ್ರಕ್ ಹತ್ತಿ 12 ಗಂಟೆಗೆ ಅಂಬಾಲಾ ತಲುಪಿದರು. ಪ್ರವಾಸದ ವೇಳೆ ರಾಹುಲ್ ಗಾಂಧಿ ಅವರು ಟ್ರಕ್ ಚಾಲಕರು ಎದುರಿಸುತ್ತಿರುವ ತೊಂದರೆ ಮತ್ತು ಸಮಸ್ಯೆಗಳ ಬಗ್ಗೆ ವಿಚಾರಿಸಿದರು. ಅಂಬಾಲ ತಲುಪಿದ ಬಳಿಕ ಮತ್ತೊಂದು ವಾಹನದಲ್ಲಿ ರಾಹುಲ್ ಗಾಂಧಿ ಹಿಮಾಚಲ ಪ್ರದೇಶದ ಶಿಮ್ಲಾಗೆ ತೆರಳಿದರು.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾತ್ರಿಯಿಡೀ ದುಡಿಯುವ ಭಾರೀ ವಾಹನ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯಲು ರಾಹುಲ್ ಗಾಂಧಿ ಟ್ರಕ್ಗೆ ಹತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದ್ದಾರೆ.. ಅಂಬಾಲಾ ಬಳಿಯ ಟ್ರಕ್ ಸ್ಟಾಪ್ನಿಂದ ರಾಹುಲ್ ಗಾಂಧಿ ವಾಹನವನ್ನು ಹತ್ತಿದ ವೀಡಿಯೊವನ್ನು ಕಾಂಗ್ರೆಸ್ ನಾಯಕರು ಸೇರಿದಂತೆ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಾರ್ಡಿ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ರಾಹುಲ್ ಗಾಂಧಿ ಟ್ರಕ್ನೊಳಗೆ ಕುಳಿತು ತಮ್ಮ ಬೆಂಬಲಿಗರತ್ತ ಕೈ ಬೀಸುತ್ತಿರುವುದನ್ನು ಕಾಣಬಹುದು. ಟ್ರಕ್ ಚಾಲಕರನ್ನು ಸಂಪರ್ಕಿಸಿ ಅವರ ಸಮಸ್ಯೆಗಳನ್ನು ತಿಳಿದುಕೊಂಡಿದ್ದಾರೆ, ಇದನ್ನು ರಾಹುಲ್ ಗಾಂಧಿ ಮಾತ್ರ ಮಾಡಬಹುದು. ರಾಹುಲ್ ಜೀ ನೀವು ಅದ್ಭುತ ಕೆಲಸ ಮಾಡುತ್ತಿದ್ದೀರಿ ಎಂದು ಇಮ್ರಾನ್ ಪ್ರತಾಪ್ ಗಾರ್ಡಿ ಟ್ವೀಟ್ ನಲ್ಲಿ ಹೇಳಿದ್ದಾರೆ.
ಮತ್ತೊಬ್ಬ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥ್, ರಾಹುಲ್ ಗಾಂಧಿ ಅವರು ಈ ದೇಶದ ಧ್ವನಿಯನ್ನು ಕೇಳಲು ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ಬಯಸುತ್ತಾರೆ. ಏತನ್ಮಧ್ಯೆ, ಟ್ರಕ್ ಪ್ರಯಾಣದ ನಂತರ ರಾಹುಲ್ ಗುರುದ್ವಾರದಲ್ಲಿ ನಿಂತಿರುವ ವೀಡಿಯೊ ಕೂಡ ಹೊರಬಿದ್ದಿದೆ.
ट्रक ड्राइवर्स की समस्याओं को जानने के लिये उनके बीच पँहुच जाना और फिर उनके साथ #NH1 पर ट्रक की सवारी करते हुए उनसे बातें करना, ये सिर्फ राहुल गॉंधी ही कर सकते हैं।कमाल करते हैं आप राहुल जी।@RahulGandhi pic.twitter.com/s2iFTQ1pPw — Imran Pratapgarhi (@ShayarImran) May 23, 2023
ट्रक ड्राइवर्स की समस्याओं को जानने के लिये उनके बीच पँहुच जाना और फिर उनके साथ #NH1 पर ट्रक की सवारी करते हुए उनसे बातें करना, ये सिर्फ राहुल गॉंधी ही कर सकते हैं।कमाल करते हैं आप राहुल जी।@RahulGandhi pic.twitter.com/s2iFTQ1pPw
— Imran Pratapgarhi (@ShayarImran) May 23, 2023
Rahul Gandhi Ji travelled in a truck from Delhi to Chandigarh and interacted with driver. Later, he was seen in a gurudwara. pic.twitter.com/T4cx6Mtfbu — Shantanu (@shaandelhite) May 23, 2023
Rahul Gandhi Ji travelled in a truck from Delhi to Chandigarh and interacted with driver. Later, he was seen in a gurudwara. pic.twitter.com/T4cx6Mtfbu
— Shantanu (@shaandelhite) May 23, 2023
Rahul Gandhi Ji near Ambala at late Night during his meeting with truck drivers and riding along with them on truck ❤️#RahulGandhi pic.twitter.com/NBVpQOW2ld — Jayvardhan Singh (@JaySinghINC) May 23, 2023
Rahul Gandhi Ji near Ambala at late Night during his meeting with truck drivers and riding along with them on truck ❤️#RahulGandhi pic.twitter.com/NBVpQOW2ld
— Jayvardhan Singh (@JaySinghINC) May 23, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.