(www.vknews.in) ; ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರಿಗೆ ಹಾಗೂ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಕೆಪಿಸಿಸಿ ಅಧ್ಯಕ್ಷರಾದ ಬಂಡೆ ಖ್ಯಾತಿಯ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ ಸಾಹೇಬರು ಉಪಮುಖ್ಯಮಂತ್ರಿಗಳಾಗಿ ಆಯ್ಕೆ ಆಗಿರುವುದಕ್ಕೆ ನಮ್ಮ ತುಂಬು ಹೃದಯದ ಅಭಿನಂದನೆಗಳು.
ಇಂದಿರಾಗಾಂಧಿ ಅವರ ಆಡಳಿತದಲ್ಲಿ ನಮ್ಮ ಕರ್ನಾಟಕದ ಬಂಜಾರಾ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಸೌಲಭ್ಯ ನೀಡಿ ಶಿಕ್ಷಣ, ಉದ್ಯೋಗ,ರಾಜಕೀಯದ ಸ್ಥಾನಮಾನವನ್ನು ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ ದಿವಂಗತ. ಕೆ.ಟಿ.ರಾಠೋಡ ಸಾಹೇಬರನ್ನು ನಮ್ಮ ಬಂಜಾರಾದ ಪ್ರತಿಯೊಬ್ಬರು ಅವರನ್ನು ಸ್ಮರಿಸುವಂತಹ ಕೆಲಸವನ್ನು ಮಾಡಿ ನಮ್ಮ ಬಂಜಾರಾ ಸಮುದಾಯಕ್ಕೆ ದಿ.ಶ್ರೀಮತಿ ಇಂದಿರಾ ಗಾಂಧಿಯವರು ಹಾಗೂ ದಿ.ಕೆ.ಟಿ.ರಾಠೋಡ ಅವರು ನಮ್ಮ ಬಂಜಾರ ಸಮುದಾಯಕ್ಕೆ ಪ್ರತಿಯೊಂದು ಮನೆಯ ಜ್ಯೋತಿಯಾಗಿದ್ದಾರೆ, ಇದಕ್ಕೂ ಮುಂಚೆ ಇದ್ದ ಬಿಜೆಪಿ ಸರ್ಕಾರವು ಒಳ ಮೀಸಲಾತಿ ತಂದು ಬಂಜಾರಾ ಸಮುದಾಯದೊಂದಿಗೆ ಇನ್ನೂ ಹಲವಾರು ಸಮುದಾಯಗಳಿಗೆ ಅನ್ಯಾಯ ಮಾಡಿದೆ..
ನಂತರದ ದಿನಗಳಲ್ಲಿ ವಿಧಾನ ಸಭೆಯ ಚುನಾವಣೆ ಹಾಗೂ ಒಳ ಮೀಸಲಾತಿಯ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ ಬಾಗಲಕೋಟ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡ ದಿ.ಕೆ.ಟಿ.ರಾಠೋಡ ಸಾಹೇಬರ ಪುತ್ರರಾದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರಕಾಶ.ಕೆ.ರಾಠೋಡ ಸಾಹೇಬರ ನೇತೃತ್ವದಲ್ಲಿ ಚುನಾವಣೆಯ ಸಂಘಟನೆಯ ಜೊತೆಗೆ ಒಳ ಮೀಸಲಾತಿಯ ವಿರುದ್ಧ ಬಾಗಲಕೋಟೆ ಜಿಲ್ಲೆಯಲ್ಲಿ ಮಾಡಿದ ಪ್ರತಿಭಟನೆ ಹಾಗೂ ಹೋರಾಟ ಇಡೀ ರಾಜ್ಯಾದಂತ ಎಲ್ಲ ಜಿಲ್ಲಾಗಳಲ್ಲಿ ಶಕ್ತಿಯನ್ನು ತುಂಬಿತು ಇದರ ಫಲವಾಗಿ ಇಂದು ರಾಜ್ಯದಲ್ಲಿ ಬಿಜೆಪಿಯು ಮಕಾಡೆ ಮಲಗಿ ನಮ್ಮ ಬಂಜಾರಾ ಸಮುದಾಯವು ಬಿಜೆಪಿಯನ್ನು ಕಿತ್ತೇಸೆದು ಕಾಂಗ್ರೆಸ್ ಪಕ್ಷದೊಂದಿಗೆ ಬಂಜಾರಾ ಸಮುದಾಯವಿದೆ ಅಂತ ತೋರಿಸಿಕೊಟ್ಟ ನಮ್ಮ ಬಂಜಾರ ಸಮಾಜದ ಹೆಮ್ಮೆಯ ನಾಯಕ ಶ್ರೀ ಪ್ರಕಾಶ.ಕೆ.ರಾಠೋಡ ಇವರನ್ನು ಸಿದ್ದರಾಮಯ್ಯ ಸಾಹೇಬರ ನೇತೃತ್ವದ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡಬೇಕೆಂದು ರಾಜ್ಯದ ಬಂಜಾರಾ ಸಮುದಾಯದ ಪರವಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಕರ್ನಾಟಕ ರಾಜ್ಯದ ಸಾರ್ವತ್ರಿಕ ಚುನಾವಣೆ ಮುಗಿದು ಕಾಂಗ್ರೆಸ್ ಪಕ್ಷ ೧೩೬ ಸ್ಥಾನ ಪಡೆದು ಅಧಿಕಾರ ನಡೆಸಲು ರಾಜ್ಯದ ಬಂಜಾರ ಜನಾಂಗದ ಪಾಲು ದೊಡ್ಡದಿದ್ದು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಬೆಂಬಲಿಸಿರುವುದು ನಿಶ್ಚಲವಾಗಿದೆ ಜನಾಂಗದ ಕನಿಷ್ಠ 01 ಜನರಿಗೆ ಸಚಿವ ಸ್ಥಾನ ನೀಡಲು ಆಗ್ರಹಿಸುತ್ತೆವೆ. ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಾದ ಶ್ರೀ ಪ್ರಕಾಶ್ ರಾಥೋಡ್ ರವರಿಗೆ ಸಂಪುಟದಲ್ಲಿ ಸ್ಥಾನ ನೀಡಲು ಕೋರಿಕೆ.
ಶ್ರೀ ಪ್ರಕಾಶ್ ರಾಠೋಡ ರವರು ವಿಧಾನ ಪರಿಷತ್ ಸದಸ್ಯರಾಗಿ ಕಾಂಗ್ರೆಸಿನ ಅತ್ಯಂತ ನಿಷ್ಠಾವಂತ ನಾಯಕರಾಗಿದ್ದು ಪಕ್ಷದ ವಿವಿಧ ಹುದ್ದೆಗಳಲ್ಲಿ ಕಳೆದ 25-30 ವರ್ಷದಿಂದ ಪಕ್ಷ ನಿಷ್ಠರಾಗಿ ದುಡಿಯುತ್ತಿದ್ದಾರೆ ಅವರ ಪ್ರಾಮಾಣಿಕ ಸೇವೆ ಹಾಗೂ ಪಕ್ಷ ನಿಷ್ಠೆಯನ್ನು ಪರಿಗಣಿಸಿ ಸಚಿವ ಸಂಪುಟದಲ್ಲಿ ಅವರಿಗೆ ಸ್ಥಾನ ನೀಡಲು ಬಾಗಲಕೋಟೆ ಜಿಲ್ಲಾ ಬಂಜಾರ ಸಮಾಜ ಆಗ್ರಹಪೂರಕವಾಗಿ ಮನವಿ ಮಾಡುತ್ತದೆ. ಈ ಸಂದರ್ಭದಲ್ಲಿ ಬಲರಾಮ್ ನಾಯಕ್ ಜಿಲ್ಲಾಧ್ಯಕ್ಷರು ಬಂಜಾರ ಸಮಾಜ ಆನಂದ ರಾಠೋಡ ಜಿಲ್ಲಾ ಉಪಾಧ್ಯಕ್ಷರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಬಾಗಲಕೋಟೆ ಗೋಪಾಲ ಜಾಧವ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಿಷ್ಣು ಪೂಜಾರಿ ಕೇಶಪ್ಪ ಶಾಂತಪ್ಪ ಲಮಾಣಿ ಕುಮಾರ್ ಲಮಾಣಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.