(www.vknews.in) ; ಕರ್ನಾಟಕದ ಪ್ರಖ್ಯಾತ ಚಲನಚಿತ್ರ ನಟರಾದ ಶ್ರೀ ಪ್ರಮೋದ್ ಶೆಟ್ಟಿ ಹಾಗೂ ಅವರ ಧರ್ಮಪತ್ನಿಯಾದ ಕಿರುತೆರೆಯ ನಟಿ ಶ್ರೀಮತಿ ಸುಪ್ರೀತ ಶೆಟ್ಟಿ ಅವರನ್ನು ಕತಾರಿನಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆವರಣದಲ್ಲಿ ಇರುವ ಸಭಾಂಗಣದಲ್ಲಿ ಭಾರತೀಯ ಸಮುದಾಯದ ಪರವಾಗಿ ಅಭಿನಂದಿಸಿ ಗೌರವಿಸಲಾಯಿತು.
ಮಣಿಪಾಲ್ ವಿಶ್ವವಿದ್ಯಾಲಯದ ಉಪಕುಲಪತಿಗಳು ಮತ್ತು ಭಾರತೀಯ ದಂತ ವೈದ್ಯ ಸಮಿತಿಯ ಅಧ್ಯಕ್ಷರಾಗಿರುವಂತಹ ಶ್ರೀ ಡಾಕ್ಟರ್ ಸುರೇಂದ್ರ ಶೆಟ್ಟಿ, ತುಳು ಚಲನಚಿತ್ರ ನಿರ್ದೇಶಕರಾಗಿರುವಂತಹ ಶ್ರೀ ಕಿಶೋರ್ ಶೆಟ್ಟಿ, ಜಾನಪದ ಕಲಾವಿದರಾದಂತ ಶ್ರೀ ಡಾಕ್ಟರ್ ನಿರಂಜನ್ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.ಈ ಸನ್ಮಾನ ಕಾರ್ಯಕ್ರಮದ ಮುತುವರ್ಜಿ ವಹಿಸಿದಂತವರು ಭಾರತೀಯ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷರಾದ ಶ್ರೀ ಮಣಿಕಂಠ ಉಪಾಧ್ಯಕ್ಷರಾದ, ಕರ್ನಾಟಕ ಮೂಲದ ಶ್ರೀ ಸುಬ್ರಹ್ಮಣ್ಯ ಹೆಬ್ಬಾಗಿಲು. ಸಭೆಯಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.