ಮುಲ್ಕಿ (www.vknews.in) : ಸುರತ್ಕಲ್ ರೇಂಜ್ ಜಂ ಇಯ್ಯತುಲ್ ಮುಅಲ್ಲಿಮೀನ್ ಇದರ ಮಹಾ ಸಭೆಯು Skjm ಇದರ ಮುಫತಿಶರಾದ ಹನೀಫ್ ದಾರಿಮಿ ಉಸ್ತಾದರ ನೇತೃತ್ವ ದಲ್ಲಿ ಕೇಂದ್ರ ಮದ್ರಸ ಮುಲ್ಕಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಲ್ಕಿ ಕೇಂದ್ರ ಜುಮಾ ಮಸೀದಿ ಖತಿಬ್ ಹಾಗೂ ಮುದರ್ರಿಸರಾದ ಸಲೀಂ ಫೈಝಿ ಇರ್ಫಾನಿ ಉದ್ಘಾಟಿಸಿದರು, ಮುದರ್ರಿಬ್ ರಿಯಾಜ್ ರಾಹ್ಮಾನಿ ತರಗತಿ ನಡೆಸಿದರು, ಮುಫತ್ತಿಶ್ ಹನೀಫ್ ದಾರಿಮಿ ಮಾತನಾಡಿ ಮದ್ರಸ ಹಾಗೂ ಮದ್ರಸದಲ್ಲಿ ನಡೆಯಬೇಕಾದ ಎಲ್ಲಾ ಕಾರ್ಯಕಗಳನ್ನು ಮನದಟ್ಟು ಮಾಡಿದರು. ತದನಂತರ 2023-24ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ :ಅಬ್ದುಲ್ಲಾ ದಾರಿಮಿ ಮುಲ್ಕಿ ಕಾರ್ಯದರ್ಶಿಯಾಗಿ ಅಬ್ದುಲ್ ರಝಕ್ ಮದನಿ ಕಾರ್ನಾಡ್ ಕೋಶಾಧಿಕಾರಿ ಇಬ್ರಾಹಿಂ ಬೊಳ್ಳೂರು ಪರೀಕ್ಷಾ ಬೋರ್ಡ್ ಚೈರ್ಮಾನ್ ಅಬೂಬಕ್ಕರ್ ಮದನಿ ಸಂತಕಟ್ಟೆ, IT codinator ಆಗಿ ತ್ವಯ್ಯಿಬ್ ಫೈಝಿ ಬೊಳ್ಳೂರು, Sksbv ಚೈರ್ಮನ್ ಮುಝಮ್ಮಿಲ್ ಯಾಮಾನಿ, ಕನ್ವಿನರ್ : ಶಂಸಿರ್ ಯಾಮಾನಿ, ಕುರುನ್ನುಗಳ್ : ರಿಯಾಝ್ ಫೈಝಿ ಹಾಗೂ ಸದಸ್ಯರು ಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಳೆದ ಒಂದು ವರ್ಷಗಳ ಕಾರ್ಯದರ್ಶಿಯಾಗಿದ್ದ ಆಸೀಫ್ ಯಾಮಾನಿ ಉಸ್ತಾರನ್ನು ಸನ್ಮಾನಿಸಲಾಯಿತು. ಆಸೀಫ್ ಯಾಮಾನಿ ಸ್ವಾಗತಿಸಿ, ಅಬ್ದುಲ್ ರಝಕ್ ಮದನಿ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.