(www.vknews.in) ಮುಡಿಪು: ಸಂಬಾರತೋಟ ಮದ್ರಸಾ ವಿಧ್ಯಾರ್ಥಿಗಳ ಸಂಘಟನೆಯಾದಸುನ್ನೀ ಬಾಲ ಸಂಘ SBS ಇದರ ವಾರ್ಷಿಕ ಮಹಾ ಸಭೆಯು ದಿನಾಂಕ 21|5|2023 ರಂದು ಬೆಳಿಗ್ಗೆ 7:30 ಕ್ಕೆ ಸರಿಯಾಗಿ ಸ್ವಾಲಿಹ್ ಅಹ್ಸನಿ ಪುಣಚ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡಿತು.
ಅಶ್ರಫ್ ಸಅದಿ ಮೂರುಗೋಳಿ ಸ್ವಾಗತ ಭಾಷಣ ಮಾಡಿದರು.ಮದ್ರಸಾ ವಿಧ್ಯಾರ್ಥಿ ಸಯ್ಯಿದ್ ಅಲವಿ ಕಿರಾಅತ್ ಪಠಿಸಿದ ಬಳಿಕ ಮುನೀರ್ ಅಹ್ಸನಿ ವಾಮಂಜೂರು ಸಭೆಯನ್ನು ಉದ್ಘಾಟಿಸಿದರು. ಸದರ್ ಮುಅಲ್ಲಿಮ್ ರಫೀಖ್ ಅಂಜದಿ ಇಂದ್ರಾಜೆ ಕಾರ್ಯಕ್ರಮದ ವಿವರಣೆಯನ್ನು ನೀಡಿ,2023-24 ನೇ ಸಾಲಿನ ನೂತನ ಸಮಿತಿಯನ್ನು ಸರ್ವಾನುಮತದಿಂದ ಆರಿಸಲಾಯಿತು.
ನೂತನ ಪದಾಧಿಕಾರಿಗಳು: ನಿರ್ದೇಶಕರು: ಸ್ವಾಲಿಹ್ ಅಹ್ಸನಿ ಮುನೀರ್ ಅಹ್ಸನಿ,ರಫೀಖ್ ಅಂಜದಿ,ಮುಸ್ತಫಾಜೌಹರಿ,ಅಶ್ರಫ್ ಸಅದಿ ,ಇಕ್ಬಾಲ್ ಜೌಹರಿ.
ಅಧ್ಯಕ್ಷರು ಹಾಗೂ ಮದ್ರಸಾ ನಾಯಕ : ತ್ವಾಲಿಬ್…
ಪ್ರಧಾನ ಕಾರ್ಯದರ್ಶಿ ಹಾಗೂ ಉಪನಾಯಕ ತುಫೈಲ್
ಕೋಶಾಧಿಕಾರಿ ಹಾಗೂ ಉಪ ನಾಯಕ ಸಿನಾನ್
ಉಪಾಧ್ಯಕ್ಷರು: ಸಾಜಿದ್
ಜೊತೆ ಕಾರ್ಯದರ್ಶಿ ಫಝಲ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಫ್ಹಮ್,ಫಾಯಿಝ್,ರಿಹಾನ್,ಮುಝಮ್ಮಿಲ್,ಮುಹೀಝ್,ಅಫೀಝ್,ಮಿಸ್ಹಬ್,ಶಮ್ಮಾಸ್
ಮದ್ರಸ ನಾಯಕಿ: ಶಿಝ
ಉಪ ನಾಯಕಿಯರು 1.ಆಫಿಯ 2.ಮುಂಶಿರ
ಸ್ವಚ್ಚತಾ ಉಸ್ತುವಾರಿಗಳಾಗಿ:, ರಿಫಾ, ಹದಾ ಹಾಗೂ ಶಿಫಾ , ಲಾಮಿಯ
ಪ್ರತಿ ಆದಿತ್ಯವಾರ ನಡೆಯಲಿರುವ ಸಾಹಿತ್ಯ ವೇದಿಕೆಯಲ್ಲಿ ಎರಡು ತಂಡಗಳಾಗಿ ಭಾಗವಹಿಸಲಿದ್ದೂ ಎರಡು ತಂಡಗಳಿಗೆ ಅಫ್ಹಮ್ ಮತ್ತು ಮುಝಮ್ಮಿಲ್ ರನ್ನು ನಾಯಕರನ್ನಾಗಿಯೂ,ಸಫಾ ಮತ್ತು ಫಾಯಿಝ ರನ್ನು ನಾಯಕಿಯರನ್ನಾಗಿಯೂ ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿ ಅಧ್ಯಾಪಕರಾದ ಮುಸ್ತಫಾ ಜೌಹರಿ ಹಾಗೂ ಇಕ್ಬಾಲ್ ಜೌಹರಿ ಉಪಸ್ಥಿತರಿದ್ದರು. ಕೊನೆಯಲ್ಲಿ ಸರ್ವರಿಗೂ ಸಿಹಿ ವಿತರಿಸಿ ಮೂರು ಸ್ವಲಾತಿ ನೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿ ಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.