(www.vknews.in) ; ಹನೂರು ತಾಲ್ಲೂಕು ವ್ಯಾಪ್ತಿಯಲ್ಲಿ ವಿವಿಧಡೆ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿದ್ದು, ಕೆಲವಡೆ ಮರಗಳು ಮುರಿದು ಬಿದ್ದಿರೆ ಇನ್ನೂ ಕೆಲವಡೆ ಮನೆ ಮೇಲ್ಚಾವಣಿ ಹಾರಿ ಹೋಗಿರುವ ಘಟನೆ ಜರುಗಿದೆ.
ಪಟ್ಟಣದ ಸೇರಿದಂತೆ ತಾಲ್ಲೂಕಿನ ಸುತ್ತಮುತ್ತ ಭಾನುವಾರ ಸಂಜೆ ಬಿರುಗಾಳಿ ಸಹಿತ ಬಿದ್ದಿರುವ ಮಳೆಗೆ ಕೆಲವಡೆ ಮರಗಳು ಮುರಿದು ಬಿದ್ದು ಸಂಚಾರಕ್ಕೆ ತೊಂದರೆಯಾಗಿದೆ. ಹನೂರು ಪಟ್ಟಣದಲ್ಲಿ ಬಾಲು ಎಂಬುವವರ ಮನೆ ಮೇಲೆ ಇರುವ ನೀರಿನ ಟ್ಯಾಂಕ್ಗೆ ಮರವೊಂದು ಮುರಿದು ಮೇಲೆ ಬಿದ್ದು ಟ್ಯಾಂಕ್ ಹೊಡೆದು ಹೋಗಿದೆ, ಜೊತೆಗೆ ಮನೆಯ ಮೇಲೆ ಮರಬಿದ್ದಿರುವುದರಿಂದ ಗೋಡೆಗೂ ಹಾನಿಯಾಗಿದೆ. ಅಲ್ಲದೇ ಕೆ.ಇ.ಬಿ ಮುಂಭಾಗ ಇರುವ ಬಡಾವಣೆಯೊಂದರ ಕ್ರಷ್ಣ ನಾಯ್ಡು ಎಂಬುವವರ ಮನೆಯ ಸೀಟ್ ಗಾಳಿಗೆ ಹಾರಿ ಹೋಗಿದೆ ದಿನಬಳಕೆಯ ವಸ್ತುಗಳು ಮಳೆಯಲ್ಲಿ ನೆನೆದು ನಷ್ಟವಾಗಿದೆ.
ಕೆರೆಯಂತೆ ಆದ ಕ್ರೀಡಾಂಗಣ : ಪಟ್ಟಣದಲ್ಲಿರುವ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ಭಾನುವಾರ ಧರಕಾರ ಮಳೆಗೆ ಅವೈಜ್ಞಾನಿಕವಾಗಿರುವ ಕ್ರೀಡಾಂಗಣದಲ್ಲಿ ಎಲ್ಲಿ ನೋಡಿದರೂ ಮಳೆ ನೀರು ನಿಂತು ಕರೆಯಂತೆ ಆಗಿದ್ದು ಪ್ರತಿ ದಿನ ಬೆಳಿಗ್ಗೆ ಹಾಗೂ ಸಂಜೆ ಸಾರ್ವಜನಿಕರು ವಾಯು ವಿಹಾರಕ್ಕೆ ಬರುತ್ತಾರೆ ಯಾವಾಗ ಮಳೆ ಬಂದರೂ ಇಲ್ಲಿ ನೀರು ನಿಲ್ಲುತ್ತದೆ ಸಂಬಂಧಪಟ್ಟ ವರು ಈ ಬಗ್ಗೆ ಕ್ರಮವಹಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಒತ್ತಾಯಿಸಿದ್ದಾರೆ.
ನೆಲಕಚ್ಚಿದ ಜೋಳದ ಫಸಲು :ಪಟ್ಟಣದ ಚಿಂಚಳ್ಳಿ ಮುಖ್ಯ ರಸ್ತೆಯ ಮಾದೇಶ್ ಎಂಬುವವರ ಜಮೀನಿನಲ್ಲಿ ಸುಮಾರುಮೂರು ಏಕರೆಯಲ್ಲಿ ಬೆಳೆಯಲಾಗಿದ್ದ ಜೋಳದ ಫಸಲು ಗಾಳಿ ಮಳೆಗೆ ನೆಲಕಚ್ಚಿದೆ. ಹಾಗೂ ಕಾಮಗೇರಿ. ಮಂಗಲ ಗ್ರಾಮದಲ್ಲಿ ಜೋಳ ಹಾಗೂ. ವಿದ್ಯುತ್ ಕಂಬಗಳು ನೆಲ ಕುರುಳಿದೆ. ರಸ್ತೆಯು ಮಧ್ಯಭಾಗದಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಪರಿಸ್ಥಿತಿ ಆಗಿದೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ನಷ್ಟಕ್ಕೆ ಒಳಾಗಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.