(ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕ ವಿಧಾನಸಭಾ ಚುನಾವಣೆಯ ಸೋಲಿನ ಕುರಿತು ತಮಿಳು ಪತ್ರಕರ್ತರ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೂತನ ಸಂಸತ್ ಭವನದ ಉದ್ಘಾಟನೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಷಾ ಅವರು ಈ ಪ್ರಶ್ನೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಸೋಲಿನ ಬಗ್ಗೆ ದಿನಮಲರ್ ಪತ್ರಿಕೆಯ ವೆಂಕಟರಾಮನ್ ಷಾ ಅವರಿಗೆ ಪ್ರಶ್ನೆ ಕೇಳಿದರು. ಅಭಿನಂದನೆಗಳು, ಅಮಿತ್ ಜೀ. ರಾಜದಂಡದ ಬಗ್ಗೆ ವಿವರವಾಗಿ ಹೇಳಿದ್ದೀರಿ. ಇದು ಚೋಳ ಸಾಮ್ರಾಜ್ಯಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ತಮಿಳುನಾಡನ್ನು ಆಳಿದ ಚೆರಚೋಳ ಮತ್ತು ಪಾಂಡ್ಯ ರಾಜವಂಶಗಳೂ ಅಧಿಕಾರದ ಹಸ್ತಾಂತರದ ಭಾಗವಾಗಿ ರಾಜದಂಡವನ್ನು ಬಳಸಿದವು. ರಾಜನು ರಾಜ್ಯವನ್ನು ಹೇಗೆ ಆಳಬೇಕು ಎಂಬುದನ್ನು ಇದು ಸೂಚಿಸುತ್ತದೆ. ಈಗ ದಕ್ಷಿಣ ಭಾರತದ ಜನ ಬಿಜೆಪಿಗೆ ಬಾಗಿಲು ಮುಚ್ಚಿದ್ದಾರೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಅಮಿತ್ ಷಾ ‘ನಿಮ್ಮ ಪ್ರಶ್ನೆಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ’ ಎಂದರು. ಮತ್ತು ಮುಂದಿನ ಪ್ರಶ್ನೆ ಯಾರದ್ದು ಎಂದು ಕೇಳಿದರು. ಈ ವೇಳೆ ಪತ್ರಕರ್ತರು, ‘ನಿಮ್ಮ ಬಳಿ ಉತ್ತರವಿಲ್ಲವಾ ಸಾರ್’ ಎಂದು ಪ್ರಶ್ನಿಸಿದಾಗ, ‘ಇವತ್ತು ರಾಜಕೀಯದ ಬಗ್ಗೆ ಚರ್ಚೆ ಇಲ್ಲ ಎಂದು ಸಚಿವರು ಉತ್ತರಿಸಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.