(www.vknews.in) : ರಾಜ್ಯ ಆಡಳಿತರೂಢ ಸರಕಾರದಲ್ಲಿ ಬದಲಾವಣೆಗಳಾದ ಬೆನ್ನಲ್ಲಿ ಮಂಗಳೂರು ನಗರದ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೆನಿಸಿರುವ ಕುಲದೀಪ್ ಜೈನ್ ರವರನ್ನು ವರ್ಗಾವಣೆಗೊಳಿಸುವ ಹುನ್ನಾರ ಒಂದು ನಡೆಯಲಾರಂಬಿಸಿದೆ.
ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಮಂಗಳೂರು ನಗರದಾದ್ಯಂತ ನಾಯಿ ಕೊಡೆಗಳಂತೆ ತಲೆಯೆತ್ತಿದ್ದ ಇಸ್ಪೀಟ್ ಕೇಂದ್ರ, ಮಟ್ಕಾ ಅಡ್ಡೆ, ವೈಶ್ಯವಾಟಿಕೆ ಕೇಂದ್ರ, ಸ್ಕಿಲ್ ಗೇಮ್ ಸಹಿತ ಕಾನೂನು ಬಾಹಿರ ಕೃತ್ಯ ನಡೆಯುವ ಎಲ್ಲಾ ಕೇಂದ್ರಗಳ ಬಾಗಿಲಿಗೆ ಬೀಗ ಜಡಿದು ನಾಗರೀಕರ ನೆಮ್ಮದಿಗೆ ಕಾರಣರಾದವರು ಮತ್ತು ಮಂಗಳೂರಿನ ಜನತೆಯ ಮಾನ ಉಳಿಸಿದವರು ಇದೇ ಕುಲದೀಪ್ ಜೈನ್.
ಇದೀಗ ಇವರ ವರ್ಗಾವಣೆಗೆ ತೆರೆ ಮರೆಯ ಯತ್ನಗಳು ನಡೆಯುತ್ತಿವೆ. ಶುದ್ಧ ಹಸ್ತದ ರಾಜಕಾರಣಿ ಎಂದೇ ಹೆಸರುಗಳಿಸಿರುವ ಯು. ಟಿ. ಖಾದರ್ ವಿಧಾನಸಭೆಯ ಸ್ಪೀಕರ್ ಆದ ಸಮಯದಲ್ಲಿಯೇ ಪ್ರಾಮಾಣಿಕ ಅಧಿಕಾರಿಯೊಬ್ಬರ ವರ್ಗಾವಣೆಗೆ ನಡೆಯುತ್ತಿರುವ ಯತ್ನಗಳಿಗೆ ತಡೆ ಹಾಕಬೇಕಿದೆ.
ಶಾಸಕರಾದ ಅಶೋಕ್ ಕುಮಾರ್ ರೈ, ಎಂಎಲ್ಸಿಗಳಾದ ಮಂಜುನಾಥ್ ಭಂಡಾರಿ ಮತ್ತು ಹರೀಶ್ ಕುಮಾರ್ ಪ್ರಾಮಾಣಿಕ ಅಧಿಕಾರಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ ಎಂಬ ನಂಬಿಕೆ ಮಂಗಳೂರು ಜನರಿಗೆ ಇದೆ. ಅದನ್ನು ಉಳಿಸಿಕೊಳ್ಳಬೇಕಾದ ಹೊಣೆ ಈ ಆಡಳಿತ ರೂಢ ಪಕ್ಷದ ಶಾಸಕರ ಮೇಲಿದೆ. ಇದರ ಜೊತೆಗೆ ದಕ್ಷ ಹಾಗೂ ಪ್ರಾಮಾಣಿಕ ಕಮಿಷನರ್ ಕುಲದೀಪ್ ಜೈನ್ ರವರ ವರ್ಗಾವಣೆಗೆ ಪ್ರಯತ್ನ ನಡೆಸುತ್ತಿರುವ ಪಾಪಿಗಳ ಹೆಸರು ಬಹಿರಂಗಗೊಳ್ಳಬೇಕಿದೆ.
— ಶೇಕ್ ಇಸಾಕ್, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.