ಹೊಸದಿಲ್ಲಿ(ವಿಶ್ವ ಕನ್ನಡಿಗ ನ್ಯೂಸ್) : ನೂತನ ಸಂಸತ್ ಭವನದಲ್ಲಿ ವಿವಿಧ ಧಾರ್ಮಿಕ ಗುರುಗಳು ಪ್ರಾರ್ಥನೆ ಸಲ್ಲಿಸಿ ಆಶೀರ್ವಚನ ನೀಡಿದರು. ಭಾರತ ಪ್ರಜಾಪ್ರಭುತ್ವ ಮತ್ತು ಧಾರ್ಮಿಕ ಸಾಮರಸ್ಯದ ದೇಗುಲ ಎಂಬುದನ್ನು ಸಾಬೀತುಪಡಿಸುವ ಸಮಾರಂಭಗಳು ಸಂಸತ್ತಿನಲ್ಲಿ ನಡೆದವು. ಸಂಸತ್ತಿನಲ್ಲಿ ಹಿಂದೂ, ಬೌದ್ಧ, ಜೈನ, ಕ್ರಿಶ್ಚಿಯನ್, ಇಸ್ಲಾಂ, ಸಿಖ್, ಜುದಾಯಿಸಂ, ಝೋರಾಸ್ಟ್ರಿಯನ್ ಮತ್ತು ಬಹಾಯಿಸಂ ಮುಂತಾದ ಧರ್ಮಗಳ ಪ್ರಾರ್ಥನೆಗಳು ಕೇಳಿಬಂದವು.
ಹೋಮ ಮತ್ತು ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬೆಳಗ್ಗೆ 7.30ಕ್ಕೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಹವನ, ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರಾಜ್ಯಸಭಾ ಉಪಸಭಾಪತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನೂತನ ಸಂಸತ್ ಭವನದಲ್ಲಿ ಬೆಳಗ್ಗೆ 8.30 ರಿಂದ 9 ಗಂಟೆಯ ನಡುವೆ ಸ್ಪೀಕರ್ ಆಸನದ ಪಕ್ಕದಲ್ಲಿರುವ ಗಾಜಿನ ಪೆಟ್ಟಿಗೆಯೊಳಗೆ ಪ್ರಧಾನಿಯವರು ಐತಿಹಾಸಿಕ ರಾಜದಂಡವನ್ನು ಇರಿಸಿದರು.
ತಮಿಳುನಾಡಿನ ಶೈವ ಮಠಗಳ ಅರ್ಚಕರ ಸಮ್ಮುಖದಲ್ಲಿ ಪ್ರಧಾನಿ ರಾಜದಂಡ ಪ್ರತಿಷ್ಠಾಪಿಸಿದರು. ಐತಿಹಾಸಿಕ ರಾಜದಂಡವನ್ನು ನಿರ್ಮಿಸಿದ ವುಮ್ಮಿಟಿ ಬಣಕಾರು ಜ್ಯುವೆಲ್ಲರ್ಸ್ ಮತ್ತು ಹೊಸ ಸಂಸತ್ ಭವನದ ನಿರ್ಮಾತೃಗಳನ್ನು ನರೇಂದ್ರ ಮೋದಿ ಅವರು ಸನ್ಮಾನಿಸಿದರು. ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.