ಗದಗ (ವಿಶ್ವ ಕನ್ನಡಿಗ ನ್ಯೂಸ್) : ಗೋಹತ್ಯೆ ನಿಷೇಧ ಇದ್ದರೂ ಕಸಾಯಿಖಾನೆಗೆ ಗೋವುಗಳು ಹೋಗುತ್ತಿವೆ. ಇದು ಸರ್ಕಾರಕ್ಕೆ, ಕಾಂಗ್ರೆಸ್ನವರಿಗೆ ಹಾಗೂ ಪೊಲೀಸ್ ಇಲಾಖೆಗೂ ಗೊತ್ತು. ಅದನ್ನು ನಿಲ್ಲಿಸದಿದ್ರೆ, ಹೋರಾಟ ಮಾಡಬೇಕಾಗುತ್ತೆ. ಅಲ್ಲಿ ಸಂಘರ್ಷ ಆದ್ರೆ, ಸರ್ಕಾರ, ಪೊಲೀಸ್ ಇಲಾಖೆಯೇ ನೇರ ಕಾರಣ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಶಾಂತಿ ಕದಡಿದ್ರೆ, ಸಂವಿಧಾನ ಶಕ್ತಿ ತೋರಿಸಬೇಕಾಗುತ್ತೆ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಇದು ಎಲ್ಲರೂ ಹೇಳುವಂಥ ಮಾತು, ಯಾರೂ ಕೂಡ ಶಾಂತಿ ಕದಡುವ ಕೆಲಸ ಮಾಡಲೇಬಾರದು. ಸಂವಿಧಾನ ಬದ್ಧವಾಗಿ, ಪ್ರಜಾಪ್ರಭುತ್ವದ ಆಧಾರದಲ್ಲಿ ಕಾನೂನ ಬದ್ಧ ಪ್ರಕ್ರಿಯೆ ಮಾಡಬೇಕು. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್, ಭಜರಂಗದಳ ಸಂಘಟನೆಗಳು ಶಾಂತಿ ಕದಡುವ ಅನಾವಶ್ಯಕ ಕಾನೂನ ಬಾಹಿರ ಯಾವುದೇ ಕೆಲಸ ಮಾಡಿಲ್ಲ, ಮಾಡುವುದೂ ಇಲ್ಲವೆಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.