ಹನೂರು (www.vknews.in) : ಹನೂರು ತಾಲೂಕು ಕೇಂದ್ರದಲ್ಲಿ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ ಸಂಚಾರಿ ನ್ಯಾಯಾಲಯದ ಉದ್ಘಾಟನಾ ಸಮಾರಂಭ ನಡೆಯಿತು.
ನೂತನ ನ್ಯಾಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳು ಸೋಮಶೇಖರ್ ರವರು ಎಲ್ಲರನ್ನು ಸಮಾನವಾಗಿ ಪ್ರತಿಪಾದಿಸಿದರೆ ಸಂವಿಧಾನ ಗೌರವಿಸಿದಂತೆ. ನಾವೆಲ್ಲರೂ ಕಾನೂನಿಗೆ ಗೌರವ ಕೊಡಲೆಬೇಕು. ನಮ್ಮದು ಜಾತ್ಯತೀತ ರಾಷ್ಟ್ರ ಈ ದೇಶದಲ್ಲಿ ಬೇಕಾದಷ್ಟು ಧರ್ಮಗಳಿವೆ ಎಲ್ಲ ಧರ್ಮವನ್ನು ನಾವು ಪ್ರೀತಿಸುವವರಾಗಬೇಕು.
ಸಂವಿಧಾನ ಕಾನೂನಿನ ಬಗ್ಗೆ ಬಹಳ ಅರ್ಥಪೂರ್ಣವಾಗಿ ವಿವರಿಸಿದ ಅವರು ಸಮಯದ ಅಭಾವ ಎಷ್ಟಿದೆ ಆ ಸಮಯದ ಮೌಲ್ಯವನ್ನು ನಾವು ತಿಳಿದು ಕೊಳ್ಳಬೇಕು. ಸಂವಿಧಾನ ರಚಿಸಲು ಶ್ರಮಿಸಿದ ಮಹಾನ್ ನಾಯಕರುಗಳ ರಚನಾ ಸಮಿತಿಯಲ್ಲಿ ಡಾ.ಬಿಆರ್ ಅಂಬೇಡ್ಕರ್ ಅವರು ಮುಖ್ಯವಾದವರು ಅವರು 2 ವರ್ಷ 11 ತಿಂಗಳು 18 ದಿನಗಳ ಕಾಲ ಹಗಲು ರಾತ್ರಿ ಕಷ್ಟ ಪಟ್ಟು 295 ಆರ್ಟಿಕಲ್ ಗಳನ್ನು ಒಳಗೊಂಡ ಬೃಹತ್ ಲಿಖಿತ ಸಂವಿಧಾನ ವನ್ನು ನಮ್ಮ ದೇಶಕ್ಕೆ ಅರ್ಪಣೆ ಮಾಡಿದ್ದಾರೆ ಅದೆಲ್ಲವನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ಸಂವಿಧಾನ ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ ಆದರೂ ನಾವು ಸಂವಿಧಾನ ಸಂಪೂರ್ಣವಾಗಿ ಓದಿಕೊಳ್ಳಬೇಕು ಅತ್ಯಂತ ದೊಡ್ಡ ಲಿಖಿತ ಸಂವಿಧಾನ ನಮ್ಮ ಭಾರತೀಯ ಸಂವಿಧಾನ. ಇಲ್ಲಿನ ತಾಲೂಕು ನ್ಯಾಯದಿಶಾರು ಜಾತಿ. ಧರ್ಮ. ಬಡವ. ಶ್ರೀಮಂತ ಎಂಬ ಬೇಧ ಬಾವವಿಲ್ಲದೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸೋ ನಿಟ್ಟಿನಲ್ಲಿ ಇಲ್ಲಿನ ನ್ಯಾಯದೀಶರುಗಳು ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.
ಈ ಭಾಗದ ಪ್ರಸಿದ್ಧ ಪುಣ್ಯ ಕ್ಷೇತ್ರ ಮಲೈ ಮಹದೇಶ್ವರ ಸ್ವಾಮಿಯ ಚರಿತ್ರೆ ಬಗ್ಗೆ ವಿವರಿಸಿ ಮಲೈ ಮಹದೇಶ್ವರ ಚಾಮರಾಜನಗರ ಜಿಲ್ಲೆಯಲ್ಲಿ ನೆಲೆಸಿರುವ ಜೀವಂತ ದೇವರು ಅವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಹೇಳಿದರು.
ಉಚ್ಛ ನ್ಯಾಯಾಲಯ ಮೂರ್ತಿಗಳು ಶಿವಶಂಕರ್ ರವರು ಮಾತನಾಡಿ ಮಹದೇಶ್ವರ ಬೆಟ್ಟ ಗೋಪಿನಾಥ ಸೇರಿದಂತೆ ಈ ಭಾಗದ ಜನರು ಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ನೂರು ನೂರೈವತ್ತು ಕಿ.ಮೀ. ದೂರದಿಂದ ಒಂದು ದಿನ ಮುಂಚಿತವಾಗಿಯೇ ಕೊಳ್ಳೇಗಾಲಕ್ಕೆ ಹೋಗಿ ಉಳಿದು ಕೊಳ್ಳಬೇಕಾದ ಪರಿಸ್ಥಿತಿಯಾಗಿತ್ತು.
ಆದರೆ ಈಗ ಹನೂರು ತಾಲೂಕು ಕೇಂದ್ರದಲ್ಲಿ ನ್ಯಾಯಾಲಯ ಪ್ರಾರಂಭ ಮಾಡಿರುವುದರಿಂದ ಈ ಭಾಗದ ಜನರಿಗೆ ಬಹಳ ಅನುಕೂಲವಾಗಲಿದೆ. ಯಾವುದೇ ವಿಚಾರದಲ್ಲಿ ಕೋರ್ಟಿಗೆ ಬರುವಂತಹ ದೂರುದಾರರಿಗೆ ನ್ಯಾಯ ಸಮ್ಮತವಾಗಿ ಉತ್ತಮ ತೀರ್ಪು ಸಿಗುವಂತೆ ಮಾಡುವಂತದು ವಕೀಲರ ಕರ್ತವ್ಯವಾಗಿದೆ.
ವಕೀಲರು ನ್ಯಾಯಾದಿಶಾರ ಜೊತೆ ಸ್ಪಂದಿಸಿ ಉತ್ತಮ ಸಮಾಜ ನಿರ್ಮಾಣ ವಾಗಲು ಸಾರ್ವಜನಿಕರ ಪ್ರೋತ್ಸಾಹ ತುಂಬಾ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ನ್ಯಾಯದಿಷರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಕಟ್ಟಡ ನಿರ್ಮಾಣ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ತಿಳಿಸಿದರು.
ಹಿರಿಯ ವಕೀಲರು ನಾಗರಾಜು ಅವರು ಮಾತನಾಡಿ ಸ್ವಾತಂತ್ರ ಬಂದ ಕಾಲದಿಂದಲೂ ನಮ್ಮ ಹನೂರು ಭಾಗದ ಜನತೆ ಕೋರ್ಟ್ ಕಚೇರಿ ವಿಚಾರದಲ್ಲಿ ವಿಚಾರದಲ್ಲಿ ಬಹಳ ನೋವು ಕಷ್ಟವನ್ನು ಅನುಭವಿಸಿದ್ದಾರೆ. ರಾಜ್ಯದಲ್ಲೇ ಅತೀ ದೊಡ್ಡ ವಿಸ್ತೀರ್ಣ ಹೊಂದಿರುವ ಎರಡನೇ ಕ್ಷೆತ್ರ.
ನಮ್ಮ ಹನೂರು ನ್ಯಾಯಾಲಯ ಸಂಬಂಧಿತ ವಿಚಾರವಾಗಿ ಸಾರ್ವಜನಿಕರು ನೂರರಿಂದ ನೂರೈವತ್ತು ಕಿ.ಮೀ. ಅಲೆದಾಡುವ ಪರಸ್ಥಿತಿ ಇತ್ತು ಅದಕ್ಕೆಲ್ಲ ಮುಕ್ತಿ ಸಿಗುವ ಸಮಯ ಇವತ್ತು ಬಂದಿದೆ. ಹನೂರು ಪಟ್ಟಣದಲ್ಲಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ನಮ್ಮ ಜಿಲ್ಲೆಯ ವರಪುತ್ರರಾದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಸೋಮಶೇಖರ್ ರವರು ಬಹಳ ಶ್ರಮ ಪಟ್ಟಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶರು ಭಾರತಿ, ಕೊಳ್ಳೇಗಾಲ ವಕೀಲರ ಸಂಘದ ಅಧ್ಯಕ್ಷ ಬಸವರಾಜ್, ನ್ಯಾಯಾಧೀಶರಾದ ಲೋಕಪ್ಪ, ಆನಂದ್, ನಿಶಾರಾಣಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಶ್ರೀಧರ್, ನಂದಿನಿ, ಕೊಳ್ಳೇಗಾಲ ಅಪರಾ ನ್ಯಾಯಾಧೀಶರು ರಘು, ತಹಸಿಲ್ದಾರ್ ಗುರುಪ್ರಸಾದ್ ಸೇರಿದಂತೆ ಇನ್ನಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.