ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ತಾಲೂಕಿನ ತೆಂಕ ಎಡಪದವು ಗ್ರಾಮದ ಬೋರಗುಡ್ಡೆ ಬದುರುದ್ದೀನ್ ರವರ ಮಗ ಮುಝಮ್ಮಿಲ್ (30) ರವರು ಕಳೆದ ಹತ್ತು ದಿನಗಳಿಂದ ಮನೆಯಿಂದ ಹೋದವರು ಹಿಂತಿರುಗಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ.
ಮುಝಮ್ಮಿಲ್ ಕಳೆದ 6-7 ವರ್ಷಗಳ ಹಿಂದೆ ಆರೋಗ್ಯದ ಸಮಸ್ಯೆ ಉಂಟಾಗಿ ಸ್ವಲ್ಪ ಬುದ್ದಿ ಮಾಂದ್ಯನಂತೆ ಇದ್ದು, ಇವರು ಮೆಡಿಕಲ್ ಶಾಪಿಗೆ ಹೋಗಿ ಹಲ್ಲುನೋವಿಗೆ ಮಾತ್ರೆ ತರುತ್ತೇನೆಂದು ಹೋಗಿ ಈವರೆಗೆ ಮನೆಗೆ ವಾಪಾಸು ಬಂದಿಲ್ಲ. ಮನೆಯವರು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರನ್ನು ಎಲ್ಲಿಯಾದರೂ ಕಂಡಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಮೊಬೈಲ್ ಸಂಖ್ಯೆ 9591496418 ತಿಳಿಸಬೇಕಾಗಿ ಮನವಿ ಮಾಡಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.