ಅಹ್ಮದ್ನಗರ (www.vknews.in) : ಮುಖ್ಯಮಂತ್ರಿ ಏಕ್ನಾಥ್ ಶಿಂದೆ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರದ ಅಹ್ಮದ್ನಗರವನ್ನು ಅಹಿಲ್ಯಾನಗರವಾಗಿ ಮರು ನಾಮಕರಣ ಮಾಡಲಾಗುವುದು ಎಂದು ಹೇಳಿದ್ದಾರೆ. ಅಹ್ಮದ್ನಗರ ಜಿಲ್ಲೆಯ ಚೋಂಡಿ ಗ್ರಾಮದಲ್ಲಿ ಜನಿಸಿದ ಮರಾಠಾ ಸಾಮ್ರಾಜ್ಯದ ರಾಣಿಯಾದ ಅಹಿಲ್ಯಾಬಾಯಿ ಹೋಲ್ಕರ್ ಅವರಿಗೆ ಅಹಿಲ್ಯಾನಗರವನ್ನು ಅರ್ಪಿಸಲಾಗುತ್ತಿದೆ ಎಂದು ಅವರು ಹೇಳಿದರು.
18ನೇ ಶತಮಾನದ ರಾಣಿಯಾದ ಅಹಿಲ್ಯಾಬಾಯಿ ಹೋಲ್ಕರ್ ಅವರ 298ನೇ ಜನ್ಮ ದಿನದಂದು ಈ ಪ್ರಕಟಣೆಯನ್ನು ಹೊರಡಿಸಲಾಗಿದೆ. ಈ ದಿನವನ್ನು ಅಹಿಲ್ಯಾಬಾಯಿ ಹೋಲ್ಕರ್ ಜಯಂತಿ ಎಂದೂ ಆಚರಿಸಲಾಗುತ್ತಿದೆ. ಸಮಾರಂಭದಲ್ಲಿ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಮಹಾರಾಷ್ಟ್ರದ ಸಚಿವ ರಾಧಾಕೃಷ್ಣ ವಿಖೆ ಹಾಗೂ ಬಿಜೆಪಿಯ ಶಾಸಕ ಗೋಪಿಚಂದ್ ಪಡಲ್ಕರ್ ಮುಂತಾದವರು ಭಾಗವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.