ಮಂಗಳೂರು (www.vknews.in) : ಅದೆಷ್ಟೋ ಸರಕಾರಿ ಯೋಜನೆಗಳು ಘೋಷಣೆ ಆಗಿದೆ, ಅನುಷ್ಟಾನ ಕೂಡ ಆಗಿದೆ, ಆದರೆ, ಬಿಜೆಪಿಯ ಸಂಸದ ಪ್ರತಾಪ ಸಿಂಹರಿಗೆ, ಕರ್ನಾಟಕದ ಆರು ಕೋಟಿ ಫಲಾನುಭವಿಗಳಿಗಿಂತ ಹೆಚ್ಚಿನ ಕಾಳಜಿ, ಪ್ರಸ್ತುತ ಸಾಬರ ಪತ್ನಿಯರಿಗೆ ಯೋಜನೆಯನ್ನು ಹೇಗೆ ತಲುಪಿಸುವುದು ಎಂದಾಗಿದೆ. ಪ್ರತಾಪ ಸಿಂಹನು ತನ್ನ ಪ್ರತಿ ಉಸಿರಿನಲ್ಲೂ ಸಾಬರ ಬಗ್ಗೆ ಪ್ರಸ್ತಾಪ ಮಾಡದಿದ್ದರೆ, ಅವರಿಗೆ ನಿದ್ದೆ, ಮದ್ದು ಊಟ ಸೇರುವುದಿಲ್ಲ.
ಕರ್ನಾಟಕದಲ್ಲಿರುವ ಮುಸ್ಲಿಮರು ಮಾತ್ರವಲ್ಲ,ಇಡೀ ಜಗತ್ತಿನ ಯಾವುದೇ ಮುಸ್ಲಿಮ್ ಮಹಿಳೆಯರ ಶರೀಯತ್ ಪಾಲಿನ ಬಗ್ಗೆ ಯಾರಿಗೂ ಯಾವುದೇ ಚಿಂತೆಯಿಲ್ಲ, ಆದರೆ ಅವರ ಪಾಲಿನ ಬಗ್ಗೆ ಇಂದು ತಲೆ ಹುಣ್ಣಾಗುವಷ್ಟು ಚೆಂತೆ ಪ್ರತಾಪ ರಿಗೆ ಆಗಿರುವುದು ವಿಪರ್ಯಾಸ.
ಪ್ರತಾಪ ಸಿಂಹ,ಸರಕಾರದ ಯೋಜನೆ ಗೃಹ ಲಕ್ಷ್ಮಿ ವಿತರಣೆಯ ಪ್ರಸ್ತಾಪ ಮಾಡಿ ಸಾಬರ ಬಹುಪತ್ನಿತ್ವವನ್ನು ಹೀಯಾಳಿಸುವುದು ಖಂಡನೀಯ, ಸಿಂಹರ ಈ ನಡವಳಿಕೆ ಜನಾಂಗ ನಿಂದನೆಯ ಪರಮಾವಧಿ ಆಗಿದೆ. ಗೃಹ ಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪ್ರಸ್ತಾಪ ಮಾಡಿ ಜನಾಂಗ ನಿಂದನೆಗೈದರೆ, ಸಿಂಹ ತಕ್ಕ ಶಾಸ್ತಿ ಎದುರಿಸಬೇಕಾದೀತು, ಸಿಂಹ ಅರಿಯಲಿ.
ಕೆ.ಅಶ್ರಫ್(ಮಾಜಿ ಮೇಯರ್) ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.