ಶ್ರೀನಿವಾಸಪುರ ( ವಿಶ್ವ ಕನ್ನಡಿಗ ನ್ಯೂಸ್ ): ಟಿ.ಎಲ್ ಮತ್ತು ಎಸ್.ಎಸ್ ವಿಭಾಗ , ಕ.ವಿ.ಪ್ರನಿನಿ , ಚಿಂತಾಮಣಿ ರವರು ದಿನಾಂಕ :07-06-2023ರ ಬುಧವಾರದಂದು ಹಾಲಿ ಇರುವ 66 ಕೆವಿ ಲಕ್ಷ್ಮೀಪುರ – ಅಡ್ಡಗಲ್ ಮಾರ್ಗದಲ್ಲಿ ಪ್ರಸ್ತಾಪಿತ 66 ಕೆವಿ ಜೋಡಿ ಮಾರ್ಗವನ್ನು ನಿರ್ಮಿಸುವ ಕಾಮಗಾರಿಯನ್ನು ನಿರ್ವಹಿಸಲು ಮತ್ತು 220 ಕೆವಿ ಸ್ವೀಕರಣಾ ಕೇಂದ್ರ , ಚಿಂತಾಮಣಿ ಮತ್ತು 66 / 11 ಕೆವಿ ವಿದ್ಯುತ್ ಉಪಕೇಂದ್ರಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು , 220 ಕೆವಿ ಸ್ವೀಕರಣಾ ಕೇಂದ್ರ , ಚಿಂತಾಮಣಿಯಿಂದ ಸರಬರಾಜಾಗುವ ಕೆಳಕಂಡ 66/11 ಕೆವಿ ಉಪಕೇಂದ್ರಗಳಿಗೆ ಮತ್ತು ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಅಡಚಣೆಯಾಗಲಿದೆ.
66/11 ಕೆವಿ ವಿದ್ಯುತ್ ಉಪಕೇಂದ್ರಗಳಾದ ತಳಗವಾರ , ಶ್ರೀನಿವಾಸಪುರ , ತಾಡಿಗೊಳ್ ಕ್ರಾಸ್ , ಲಕ್ಷ್ಮೀಪುರ , ರಾಯಲ್ಪಾಡು , ಸೋಮಯಾಜಲಹಳ್ಳಿ , ಗೌನಿಪಲ್ಲಿ , ಸೋಮಯಾಜಲಹಳ್ಳಿ 20 ಮೆ.ವ್ಯಾ ಸೋಲಾರ್ ಪ್ಲಾಂಟ್ , ಶೆಟ್ಟಿಮಾದಮಂಗಲ ( ಕೋಲಾರ ತಾಲ್ಲೂಕು ) ಹಾಗೂ ಅಡ್ಡಗಲ್ ಉಪಕೇಂದ್ರಗಳಿಗೆ ಮತ್ತು ಗ್ರಾಹಕರಿಗೆ ಜೂನ್ 07 ಬೆಳಿಗ್ಗೆ 09.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಗ್ರಾಹಕರು ಸಹಕರಿಸಬೇಕು ಎಂದು ಕೋಲಾರ ಬೆಸ್ಕಾಂ , ವಾಣಿಜ್ಯ , ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ( ವಿ ) ಅವರು ತಿಳಿಸಿದ್ದಾರೆ .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.