ತುಮಕೂರು (ವಿಶ್ವ ಕನ್ನಡಿಗ ನ್ಯೂಸ್) : ಒಡಿಶಾದಲ್ಲಿ ನಡೆದ ಘೋರ ರೈಲು ದುರಂತಕ್ಕೆ ಮಸೀದಿ ಕಾರಣವೆಂದು ಬಿಜೆಪಿ ನಾಯಕಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿದ್ದರು. ರೈಲು ದುರಂತದ ಸಮೀಪದಲ್ಲಿ ಮಸೀದಿ ಇತ್ತು ಎಂದು ತುಮಕೂರು ಮೂಲದ ಬಿಜೆಪಿ ನಾಯಕಿಯೊಬ್ಬರು ಎಡಿಟ್ ಮಾಡಿದ ಫೋಟೋ ಹಂಚಿಕೊಂಡಿದ್ದು, ಈ ಬಗ್ಗೆ ಒಡಿಶಾ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ತುಮಕೂರಿನ ನಿವಾಸಿ ಹಾಗೂ ಬಿಜೆಪಿ ನಾಯಕಿಯಾಗಿರುವ ಶಂಕುತಲಾ ನಟರಾಜ್ ಎಂಬವರು ಅಪಘಾತ ನಡೆದ ಸ್ಥಳದ ಸಮೀಪದಲ್ಲಿ ಮಸೀದಿ ಇದೆ ಎಂದು ಹೈಲೈಟ್ ಮಾಡಿದ ಫೋಟೋ ಅನ್ನು ಟ್ವೀಟ್ ಮಾಡಿದ್ದರು. ಘಟನೆಗೆ ಮಸೀದಿಯೇ ಕಾರಣ ಎಂಬಂತೆ ಬಿಂಬಿಸಲಾಗಿತ್ತು. ಹೀಗೆ ಪೋಟೋ ಶೇರ್ ಮಾಡಿರುವ ಮಹಿಳೆ ಬಗ್ಗೆ ಒಡಿಶಾ ಪೊಲೀಸರು ಮಾಹಿತಿ ಕಲೆಹಾಕಲು ಮುಂದಾಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ಶೇರ್ ವಿವಾದಕ್ಕೆ ಒಳಗಾಗಿತ್ತು. ನಂತರ ಪೋಟೋ ವೈರಲ್ ಆಗುತ್ತಿದ್ದಂತೆ ಅದನ್ನು ಡಿಲೀಟ್ ಮಾಡಲಾಗಿತ್ತು. ಇದು ಸುಳ್ಳು ಸುದ್ದಿ ಎಂದು ಒಡಿಶಾ ಪೊಲೀಸರು ಟ್ವೀಟ್ ಮಾಡಿದ್ದಾರೆ. ಇದರ ಬೆನ್ನಲ್ಲೇ ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದು, ಶೇರ್ ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.