ಮಾಡನ್ನೂರು (www.vknews.in) : ದಕ್ಷಿಣ ಕನ್ನಡದ ಪ್ರತಿಷ್ಠಿತ ವಿದ್ಯಾಸಂಸ್ಥೆ ಸಮನ್ವಯ ವಿದ್ಯಾಭ್ಯಾಸ ದೊಂದಿಗೆ ನವ ಕ್ರಾಂತಿಯನ್ನು ಸೃಷ್ಟಿಸುತ್ತಿರುವ ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ವಿದ್ಯಾರ್ಥಿಗಳ ಸಂಘಟನೆಯಾದ ಎನ್ ಎಸ್ ಯೂ ನೂರುಲ್ ಹುದಾ ಸ್ಪೂಡೆಂಟ್ಸ್ ಯೂನಿಯನ್ ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಜೂನ್ 28 ರಂದು ಕ್ಯಾಂಪಸ್ ನಲ್ಲಿ ನಡೆದ ಮಹಾ ಸಭೆಯಲ್ಲಿ ಈ ಆಯ್ಕೆಯು ನಡೆಯಲಾಯಿತು.
ಅಧ್ಯಕ್ಷರಾಗಿ ಸಫ್ಘಾನ್ ಪಾರಪಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಮದಸ್ಸಿರ್ ಸರಾವು ಕೋಶಾಧಿಕಾರಿಯಾಗಿ ಜಮೀಲ್ ಬನ್ನೂರು ಹಾಗು ಪಿ ಆರ್ ಓ ಆಗಿ ಮುಹಮ್ಮದ್ ಶಮಿ ಉಪ್ಪಿನಂಗಡಿ ಆಯ್ಕೆಗೊಂಡರು. ಅದೇ ರೀತಿ ಉಪಾಧ್ಯಕ್ಷರಾಗಿ ಅರ್ಫಾಝ್ ಮುಕ್ವೆ ಹಾಗೂ ಕಾರ್ಯನಿರ್ವಾಹಕ ಕಾರ್ಯದರ್ಶಿಯಾಗಿ ಸನಾಫ್ ಉಪ್ಪಿನಂಗಡಿ ಜೊತೆ ಕಾರ್ಯದರ್ಶಿಯಾಗಿ ಇಹ್ಸಾನ್ ಕಡಬ ಮತ್ತು , ಹಣಕಾಸು ಕಾರ್ಯದರ್ಶಿಯಾಗಿ ಹಾಶಿರ್ ಕಟ್ಟತ್ತಾರು ರವರನ್ನು ಆಯ್ಕೆ ಮಾಡಲಾಯಿತು. ಸಂಘಟನಾ ಉಸ್ತುವಾರಿ ರಾಶಿದ್ ಹುದವಿ ಉಸ್ತಾದ್ ರವರ ನೇತೃತ್ವದಲ್ಲಿ ಸಭೆಯು ನಡೆಯಿತು.
ಕಾರ್ಯಯೋಜನೆಗಳನ್ನು ಉತ್ತಮ ರೀತಿಯಲ್ಲಿ ನಡೆಸಲು ಉಪಸಮಿತಿಗಳನ್ನು ರಚಿಸಿ ಅದರ ನಾಯಕರನ್ನು ಆಯ್ಕೆ ಮಾಡಲಾಯಿತು. ಹೆಚ್.ಆರ್. ಡಿ. ಚ್ಯಾರ್ಮಾನ್ ಆಗಿ ಅಶ್ಫಾಖ್ ಮಾಸ್ತಿಕುಂಡು, ಆರ್ಗನೈಝೇಷನ್ ಸಮಿತಿಯ ಚ್ಯಾರ್ಮಾನ್ ಆಗಿ ಬಾಸಿತ್ ಅಜ್ಜಾವರ, ರೈಟರ್ಸ್ ಕ್ಲಬ್ ಚ್ಯಾರ್ಮಾನ್ ಆಗಿ ಸಲೀಂ ಮಾಣಿ, ಸ್ಪೀಕರ್ಸ್ ಫೋರಂ ಚ್ಯಾರ್ಮಾನ್ ಆಗಿ ವಸೀಂ ಕಾಸರಗೋಡು , ಇಂಟೆಲಿಜೆನ್ಸ್ ಚ್ಯಾರ್ಮಾನ್ ಆಗಿ ಇಲ್ಯಾಸ್ ಮೆಲ್ಕಾರ್, ಜೂನಿಯರ್ಸ್ ಕಾಡಿನೇಟರ್ಸ್ಗಳಾಗಿ ಶಾಮಿಲ್ ಮತ್ತು ರಾಝಿ ಕೊಡಾಜೆ ಲಾಂಗ್ವೇಜ್ ಕ್ಲಬ್ ಚ್ಯಾರ್ಮಾನ್ ಆಗಿ ಆಸಿಂ ಗಾಳಿಮುಖ, ಕನ್ನಡ ಸಂಘದ ಚ್ಯಾರ್ಮಾನ್ ಆಗಿ ಅಜ್ಮಲ್ ಉಜಿರೆ ಎಸ್ ಕೆ ಎಸ್ ಎಸ್ ಎಸ್ ಎಫ್ ಕ್ಯಾಂಪಸ್ ಚ್ಯಾರ್ಮಾನ್ ಆಗಿ ಶಬೀರ್ ಈಶ್ವರಮಂಗಲ, ಮೆಡಿಕಲ್ ವಿಂಗ್ ಚ್ಯಾರ್ಮಾನ್ ಆಗಿ ಶುಹೂದ್ ಗಡಿಯಾರ್, ಮೀಡಿಯಾ ಚ್ಯಾರ್ಮಾನ್ ಆಗಿ ಬದ್ರುದ್ದೀನ್ ಮೂಡಿಗೆರೆ ರವರನ್ನು ಆಯ್ಕೆ ಮಾಡಲಾಯಿತು.
ನವಪೀಳಿಗೆಯ ಹಿತಾಸಕ್ತಿಗೆ ಪೂರಕವಾದ ರೀತಿಯಲ್ಲಿ ವಿದ್ಯಾರ್ಥಿಗಳ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಉತ್ತೇಜನ ನೀಡಿ, ವಿದ್ಯಾರ್ಥಿಗಳು ಕಾಲದ ನವ ಬದಲಾವಣೆಯನ್ನು ಓದಿ ಪರಿಹಾರ ಕಂಡುಕೊಳ್ಳುವಲ್ಲಿ ಅವರನ್ನು ಸಬಲೀಕರಿಸುವಲ್ಲಿ ಸಂಘಟನೆಯು ಐತಿಹಾಸಿಕ ಹೆಜ್ಜೆಯಿಡಲಿದೆಯೆಂದು ನೂತನ ಪ್ರಾಂಶುಪಾಲರಾದ ಅಡ್ವ ಹನೀಫ್ ಹುದವಿ ದೇಲಂಪಾಡಿ ಈ ಸಮಾರಂಭ ಸಭೆಯಲ್ಲಿ ನುಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.