ಮಂಗಳೂರು (www.vknews.in) : ಪರಿಸರವನ್ನು ಮಾಲಿನ್ಯದಿಂದ ಸಂರಕ್ಷಣೆ ನೀಡುವುದು ಕೂಡ ಪುಣ್ಯ ಕರ್ಮವಾಗಿದೆ ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರೂ ಹಾಗು ವಾದಿತ್ವೈಬ ಪ್ರಾಂಶುಪಾಲರೂ ಆದ ತೋಡಾರ್ ಉಸ್ಮಾನುಲ್ ಫೈಝಿ ಹೇಳಿದರು.
ಅವರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎಸ್ ಕೆ ಎಸ್ ಎಸ್ ಎಫ್ ವೆಸ್ಟ್ ಜಿಲ್ಲಾ ವತಿಯಿಂದ ನಡೆದ ಜಿಲ್ಲಾ ಸಮಾವೇಶದಲ್ಲಿ ಉದ್ಘಾಟಿಸಿ ಮಾತಾಡಿದರು. ಮರ ನೆಡುವುದು, ಸಸಿಗಳನ್ನು ಪೋಷಿಸುವುದನ್ನು ಇಸ್ಲಾಮ್ ಧರ್ಮ ತುಂಬಾ ಪ್ರೋತ್ಸಾಹ ನೀಡಿದ್ದನ್ನು ಅರ್ಥ ಮಾಡಿ ಎಸ್ ಕೆ ಎಸ್ ಎಸ್ ಎಫ್ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತoಙಲ್ ಅಧ್ಯಕ್ಷತೆ ವಹಿಸಿದ್ದರು. ಬಾತಿಷ್ ತಙಲ್, ರಿಯಾಝ್ ರಹ್ಮಾನಿ, ಫಾರೂಕ್ ದಾರಿಮಿ ಮುಖ್ಯ ಪ್ರಭಾಷಣಗೈದರು. ಉತ್ತಮ ಕೃಷಿಕ ಎಂಬ ವಿಶೇಷ ಪ್ರಶಸ್ತಿಯನ್ನು ಅಬೂಸ್ವಾಲಿಹ್ ಹಾಜಿಗೆ ನೀಡಲಾಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ ಸ್ವಾಗತಿಸಿ ನಿರೂಪಿಸಿದರು. ವರ್ಕಿಂಗ್ ಕಾರ್ಯದರ್ಶಿ ಬದ್ರುದ್ದೀನ್ ಕುಕ್ಕಾಜೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.