(www.vknews.in) ; ಸವಣೂರು- ಬದ್ರಿಯಾ ಜುಮಾ ಮಸೀದಿ ಚಾಪಲ್ಲ ಸವಣೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸಯ್ಯಿದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಇದರ ವಿದ್ಯಾರ್ಥಿ ಸಂಘಟನೆಯಾದ ಮಕಾಷಿಫುಲ್ ಖುಲೂಬ್ ದರ್ಸ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಇದರ ವತಿಯಿಂದ ಜೂನ್ 5 “ಪರಿಸರ ದಿನಾಚರಣೆಯ” ಪ್ರಯುಕ್ತ ನಡೆದ ನಾಳೆಗೊಂದು ಗಿಡ ಕಾರ್ಯಕ್ರಮದಲ್ಲಿ ಸಸ್ಯಗಳನ್ನು ನೆಡುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಚಾಪಲ್ಲ ದರ್ಸ್ ಮುದರ್ರಿಸ್ ಬಹು| ಉಸ್ತಾದ್ ಅಶ್ರಫ್ ಫಾಝಿಲ್ ಬಾಖವಿ ಗಿಡ ನೆಡುವ ಮೂಲಕ ಮಳೆಗಾಗಿ ಪ್ರಾರ್ಥನೆ ನಡೆಸಿದರು. ಮಕಾಷಿಫುಲ್ ಖುಲೂಬ್ ದರ್ಸ್ ಪ್ರಧಾನ ಕಾರ್ಯದರ್ಶಿ ಹನೀಫ್ ಸವಣೂರು ಮಾತನಾಡಿ “ಗಿಡ ನೆಡುವ ಕಾರ್ಯಕ್ಕೆ ಇಸ್ಲಾಮಿನಲ್ಲಿ ಬಹಳಷ್ಟು ಪ್ರಾಧಾನ್ಯತೆ ಇದೆ, ನಾವು ಗಿಡವನ್ನು ಪರಿಸರ ದಿನದಂದು ಕೇವಲ ಫೋಟೋಗಳಿಗಾಗಿ ನೆಟ್ಟರೆ ಸಾಲದು ಅವುಗಳಿಗೆ ದೈನಂದಿನ ಜೀವ ಕೊಡುವ ಬಾಧ್ಯತೆಯನ್ನೂ ಹೊಂದಿರಬೇಕು. ಈ ವರ್ಷ ಪರಿಸರ ದಿನದಂದು ಗಿಡ ನೆಡುವಾಗ ಕಳೆದ ವರ್ಷ ನಾವು ನೆಟ್ಟ ಗಿಡಗಳಿಗೊಮ್ಮೆ ಕಣ್ಣು ಹಾಯಿಸಬೇಕು” ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮಕಾಷಿಫುಲ್ ಖುಲೂಬ್ ದರ್ಸ್ ಉಪಾಧ್ಯಕ್ಷರಾದ ಸಯ್ಯಿದ್ ಮುಈನ್ ತಂಙಳ್ ಸಾಲ್ಮರ, ಸಂಘಟನಾ ನಾಯಕರು ಹಾಗೂ ದರ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.