ಮಂಗಳೂರು (www.vknews.in) : ಕಲ್ಲಾಪು ಬಳಿ ಅಕ್ರಮ ಜಾನುವಾರು ಸಾಗಾಟ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ನಾಲ್ವರನ್ನು ಬಂಧಿಸಲಾಗಿದೆ. ಉಳ್ಳಾಲ ಮೂಲದ ಅಹಮ್ಮದ್ ಇರ್ಷಾದ್, ಜಾಫರ್ ಸಾದಿಕ್ , ಫಯಾಝ್ ಮತ್ತು ಮಂಜೇಶ್ವರದ ಖಾಲಿದ್ ಬಿಎಂ ಬಂಧಿತರು.
ಆರೋಪಿಗಳು ಅಂಬ್ಲಮೊಗರು ಎಂಬಲ್ಲಿ ವೃದ್ಧೆಯೊಬ್ಬರಿಂದ ನಾಲ್ಕು ಹಸುಗಳನ್ನು ಖರೀದಿಸಿ ಕೇರಳ ನೋಂದಾಯಿತ ಸಂಖ್ಯೆಯ ಮಿನಿ ಗೂಡ್ಸ್ ವಾಹನದಲ್ಲಿ ವಧೆ ಮಾಡಲು ಸಾಗಿಸುತ್ತಿದ್ದರು. ದ್ವಿಚಕ್ರ ವಾಹನವೊಂದು ವಾಹನವನ್ನು ಹಿಂಬಾಲಿಸುತ್ತಿತ್ತು. ಈ ವೇಳೆ ವಾಹನ ಕೆಟ್ಟು ರಸ್ತೆಯ ಮೇಲೆ ಏರಲು ಸಾಧ್ಯವಾಗದಿದ್ದಾಗ, ಈ ಮೂವರು ವಾಹನ ತಳ್ಳಲು ಪ್ರಾರಂಭಿಸಿದರು. ಸ್ಥಳೀಯ ನಿವಾಸಿಗಳು ವಾಹನವನ್ನು ತಳ್ಳಿ ಸಹಾಯ ಮಾಡಲು ಹೋದಾಗ ನಾಲ್ಕು ಹಸುಗಳನ್ನು ಕಟ್ಟಿ ಹಾಕಿ ಟಾರ್ಪಲ್ ಹಾಕಿರುವುದು ಗಮನಕ್ಕೆ ಬಂದಿತ್ತು. ವಿಚಾರಣೆ ನಡೆಸಿದಾಗ ಆರೋಪಿಗಳು ಸರಕು ಸಾಗಣೆ ವಾಹನ, ಹಸುಗಳು ಹಾಗೂ ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.