ಹೊಸ ಚಿಂತನೆಗಳನ್ನು ಅಕ್ಷರಗಳಿಗೆ ಇಳಿಸಿ ಪದಗಳನ್ನು ಜೋಡಿಸಿದಾಗ ಮೂಡಿ ಬರುವ ವಿಚಾರಗಳ ಸವಿಯೂಟವನ್ನು ಜನರಿಗೆ ಹೆಚ್ಚು ತಲುಪಿಸುವಂತಾಗಲು ಏನು ಮಾಡಬೇಕೆಂದು ಯೋಚಿಸುವಾಗ ನನ್ನಂತವರಿಗೆ ತಟ್ಟನೆ ನೆನಪು ಬರುವುದು ವಿಕೆ ನ್ಯೂಸ್..!
ಈ ಬಳಗದ ಸ್ನೇಹಿತ ಮಿತ್ರರಿಗೆ ಅದನ್ನ ಕಳುಹಿಸಿ ಕೊಟ್ಟರೆ ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿ ಜನರಿಗೆ ತಲುಪಿಸುವ ಕೆಲಸ ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡುತ್ತಿರುವುದು ನಿಜಕ್ಕೂ ಪುಣ್ಯದ ಕೆಲಸ. ಅನಿವಾಸಿಯರ ಮಧ್ಯೆ ಹೆಚ್ವು ಪ್ರಚಾರದಲ್ಲಿರುವ ಈ ವೆಬ್ ನ್ಯೂಸ್ ಕರಾರುವಕ್ಕಾದ ವರದಿಗಾರಿಕೆಯಲ್ಲಿ ಎತ್ತಿದ ಕೈ.
ಹದಿಮೂರು ವರ್ಷದ ಸೇವಾ ಕೈಂಕರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡು ಸೋಶಿಯಲ್ ಮೀಡಿಯಾ ಕ್ಷೇತ್ರದಲ್ಲಿ ಗಮನಾರ್ಹ ಸೇವೆಗೈದ ವಿಕೆ ನ್ಯೂಸ್ ನಿಜಕ್ಕೂ ಸರಕಾರಿ ಮಟ್ಟದ ಪ್ರಶಸ್ತಿಗೆ ಅರ್ಹವಾಗಿದೆ.
ಅನಿವಾಸಿ ಕನ್ನಡಿಗರಿಗೆ ಕರ್ನಾಟಕದ ಮತ್ತು ದೇಶದ ಆಗು ಹೋಗುಗಳನ್ನ ಕ್ಷಣಾರ್ಧದಲ್ಲಿ ತಲುಪಿಸುವ ಕೆಲಸ ಮಾಡುತ್ತಿರುವುದೇ ಅಲ್ಲದೆ ಉತ್ತಮ ಅಭಿರುಚಿಯ ಸೌಹಾರ್ದ ಪರಂಪರೆಯನ್ನು ಎತ್ತಿಹಿಡಿಯುವ ವಿವಿಧ ವಿಚಾರಗಳನ್ನು, ಲೇಖನಗಳನ್ನು, ಗಣ್ಯರ ಹೇಳಿಕೆಗಳನ್ನು ಪ್ರಕಟಿಸಿ ಸಮಕಾಲೀನ ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಹೀಗೇ ಎಲ್ಲಾ ಪ್ರಮುಖ ಕ್ಷೇತ್ರದಲ್ಲಿ ಸುಧಾರಣಾ ಕ್ರಮಗಳಿಗೆ ಪ್ರೋತ್ಸಾಹ ನೀಡುವ ವೈಚಾರಿಕ ವೈವಿಧ್ಯತೆಗೆ ವೇದಿಕೆ ಒದಗಿಸಿ ಕೊಡುವ ಮೂಲಕ ವಿಕೆ ನ್ಯೂಸ್ ಮೀಡಿಯಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಮುನ್ನುಗ್ಗುತ್ತಿರುವುದು ಸಂತೋಷದ ವಿಚಾರ.
ಇದರ ಹಿನ್ನಲೆ ಶಿಲ್ಪಿಗಳಿಗೆ ಇನ್ನಷ್ಟು ಹೆಚ್ಚಿನ ಮಟ್ಟದಲ್ಲಿ ಕಾಲದ ಕರೆಗೆ ಸ್ಪಂದಿಸುವ ಚಾಕಚಕ್ಯತೆಯನ್ನ ಭಗವಂತ ಒದಗಿಸಲಿ ಎಂದು ಪ್ರಾರ್ಥಿಸುತ್ತೇನೆ.
— ಎಸ್ ಬಿ ದಾರಿಮಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.