(www.vknews.in) : 40 ವರ್ಷಗಳಲ್ಲಿ 16,000 ಹೃದಯ ಶಸ್ತ್ರಚಿಕಿತ್ಸೆ ಮಾಡಿದ್ದ ಹೃದ್ರೋಗ ತಜ್ಞ ನಿದ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಗುಜರಾತ್ನ ಜಾಮ್ ನಗರ್ನ ಖ್ಯಾತ ಹೃದ್ರೋಗ ತಜ್ಞ ಡಾ. ಗೌರವ್ ಗಾಂಧಿ ನಿಧನರಾದರು. ಅವರಿಗೆ 41 ವರ್ಷ ವಯಸ್ಸಾಗಿತ್ತು.
ರಾಜ್ಯದ ಅತ್ಯುತ್ತಮ ಹೃದ್ರೋಗ ತಜ್ಞ ಎಂದು ಗುರುತಿಸಿಕೊಂಡಿರುವ ಡಾ. ಗೌರವ್ ಗಾಂಧಿ ಎಂದಿನಂತೆ ರಾತ್ರಿ ರೋಗಿಗಳನ್ನು ನೋಡಿ ಮನೆಗೆ ಮರಳಿದ್ದರು. ರಾತ್ರಿ ಊಟ ಮುಗಿಸಿ ಮಲಗಿದ್ದ ಅವರಿಗೆ ನಿದ್ದೆಯಲ್ಲಿ ಹೃದಯಾಘಾತವಾಗಿತ್ತು. ಈ ಮೊದಲು ಯಾವುದೇ ದೈಹಿಕ ಸ್ಥಿತಿ ತೋರಿರಲಿಲ್ಲ.ಆರೋಗ್ಯ ಸಮಸ್ಯೆ ಇದ್ದಂತೆ ಕಾಣುತ್ತಿರಲಿಲ್ಲ ಎಂದು ಮನೆಯವರು ತಿಳಿಸಿದ್ದಾರೆ. ಆದರೆ, ಸದಾ ಜಾಗರಣೆಯಲ್ಲಿರುತ್ತಿದ್ದ ಗೌರವ್ ಬೆಳಗ್ಗೆ ಆರು ಗಂಟೆಯಾದರೂ ಏಳದೇ ಇದ್ದಾಗ ಕುಟುಂಬಸ್ಥರು ಬಂದು ಎಬ್ಬಿಸಲು ಯತ್ನಿಸಿದ್ದಾರೆ.
ಎಚ್ಚೆತ್ತುಕೊಳ್ಳದ ಕಾರಣ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಪರೀಕ್ಷೆ ಬಳಿಕ ಸಾವು ದೃಢಪಟ್ಟಿದ್ದು, ಗೌರವ್ ಸಾವಿಗೆ ಹೃದಯಾಘಾತವೇ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.