(www.vknews.in) ; ಬೆಳ್ತಂಗಡಿ ತಾಲೂಕು ಪುದುವೆಟ್ಟು ಗ್ರಾಮ ಸಮಸ್ತ ಧಾರ್ಮಿಕ ವಿಧ್ಯಾರ್ಥಿ ಸಂಘಟನೆಯಾದ SKSSF ಬೊಳ್ಮಿನಾರ್ ಶಾಖೆಯ ವತಿಯಿಂದ ಕೆಮ್ಮಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ಕೆಮ್ಮಟೆ ಶಾಲೆಯಲ್ಲಿ SKSSF ಬೊಳ್ಮಿನಾರ್ ಶಾಖೆ ಅಧ್ಯಕ್ಷರು ಹಾಗೂ SDMC ಅಧ್ಯಕ್ಷರೂ ಆದ ಅಬೂಬಕರ್ ಕುಂಟ್ಯಾನ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ SKSSF ಕರ್ನಾಟಕ ರಾಜ್ಯ ಸಮೀತಿ ಸದಸ್ಯರಾದ ನಝೀರ್ ಅಝ್ಹರಿಯವರು ಸಂಘಟನೆಯ ಧ್ಯೇಯ ಉಧ್ಧೇಶಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಪುದುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ರಾಮೇಂದ್ರನ್ ಮೇರ್ಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಂಘಟನೆಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾ ಮುಖ್ಯ ಶಿಕ್ಷಕಿಯವರಾದ ಶಿಲ್ಪಾ ಟೀಚರ್ ವಿಧ್ಯಾರ್ಥಿಗಳಿಗಾಗಿ ಉಚಿತ ಪುಸ್ತಕ ವಿತರಿಸಿದ ಕಾರ್ಯವನ್ನು ಶ್ಲಾಘಿಸುತ್ತಾ ಸಂಘಟಕರಿಗೆ ಸ್ವಾಗತಿಸಿ ಅಭಿನಂದಿಸಿದರು.
ಪುದುವೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಫೂರ್ ಬೊಳ್ಮನಾರ್, ಮಾಜಿ ಉಪಾಧ್ಯಕ್ಷರಾದ ಬೊಮ್ಮಣ್ಣ ಗೌಡ, ಸಮಾಜ ಸೇವಕರಾದ ಶಶಿ ಕರಂಬಾರ್ ಸಂಘಟನೆ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾಜಿ ಪಂಚಾಯತ್ ಸದಸ್ಯರಾದ ನಾರಾಯಣ ಪಿಲಿಕ್ಕಳ, ಹಳೇ ವಿಧ್ಯಾರ್ಥಿ ಸಂಘದ ಸದಸ್ಯರಾದ ಬಾಲಕ್ರಷ್ಣ, ಊರಿನ ಹಿರಿಯರಾದ ಕೂಸಪ್ಪ ಗೌಡ, SKSSF ಶಾಖೆಯ ಉಪಾಧ್ಯಕ್ಷರಾದ ರಫೀಖ್ ಅಲಪ್ಪಾಯ,ಕೋಶಾಧಿಕಾರಿ ಬಶೀರ್ ಅಲಪ್ಪಾಯ,ಸದಸ್ಯರಾದ ಬಶೀರ್ ಕಾಪಾಯ, ಹಳೇ ವಿಧ್ಯಾರ್ಥಿ ಸಂಘದ ಸದಸ್ಯರಾದ ಸುರೇಶ್ ಕುಂಟ್ಯಾಣ,ರಹಿಮಾನ್ ಅಲಪ್ಪಾಯ ಅತಿಥಿಗಳಾಗಿ ಭಾಗವಹಿಸಿದರು.
ಶಾಲಾ ಶಿಕ್ಷಕಿರಾದ ಪ್ರೀತಿಕುಮಾರಿ ,ಅಶ್ವಿನಿ,ಪವಿತ್ರ ಇತರ ಪೋಷಕರು,ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. SKSSF ಶಾಖೆಯ ಸಂಘಟನಾ ಕಾರ್ಯದರ್ಶಿ ರಹೀಂ ಮಖ್ದೂಮಿ ಅಬೀರಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಿಧ್ಯಾರ್ಥಿಗಳಿಗೆ ಉಪದೇಶವಿತ್ತರು. ನಂತರ ವಿಧ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗೂ ಅಂಗನವಾಡಿ ವಿಧ್ಯಾರ್ಥಿಗಳಿಗೆ ಸ್ಲೇಟು ಮತ್ತು ಬರಹ ಕಡ್ಡಿಗಳನ್ನು ವಿತರಿಸಲಾಯಿತು. SKSSF ಶಾಖಾ ಕಾರ್ಯದರ್ಶಿ ಸಿಧ್ಧೀಖ್ ಅಲಪ್ಪಾಯ ವಂದಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ , ಪಾನಿಯ ವಿತರಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.